ಧೋನಿಗೆ ಗಜಕೇಸರಿ ಯೋಗ

PTI
ಟ್ವೆಂಟಿ20 ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ವಿಶ್ವ ಕಪ್ ತಂದ ಟೀಮ್ ಇಡಿಯಾದ ಹಾಲಿ ಕಪ್ತಾನ ಮಹೇಂದ್ರ ಸಿಂಗ್ ಧೋನಿ 1981ರ ಜುಲೈ 7ರಂದು ಚಂದ್ರ ಲಘ್ನ ಕನ್ಯಾದಲ್ಲಿ ಜಾರ್ಖಂಡಿನ ರಾಂಚಿಯಲ್ಲಿ ಜನಿಸಿದರು. ಬಾಂಗ್ಲಾದೇಶದ ವಿರುದ್ಧ 2004 ರಲ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡಿದ ಧೋನಿ ಕೇವಲ 3 ವರ್ಷಗಳಲ್ಲೇ ವಿಶ್ವಕಪ್ ತರುವ ಮೂಲಕ ಭಾರತದ ಗೌರವವನ್ನು ಮರಳಿ ಸ್ಥಾಪಿಸಿದರು.

ಧೋನಿಯ ಚಂದ್ರ ಕುಂಡಲಿ ಗಜಕೇಸರಿ ಯೋಗವನ್ನು ಪಡೆದಿದೆ. ಇದರಿಂದ ಅವರಿಗೆ ರಾಜ ಸುಖವಂತೂ ಸಿಗುವುದು. ಅದರ ಜತೆಗೆ ಶನಿ-ಚಂದ್ರರ ಮಿಲನವೂ ಒಳಿತು ತರುವುದು. ಶನಿ ಪಂಚಮೇಶದಿಂದ ಬಂದು ಐಶ್ವರ್ಯದ ಸಮೀಪವಿದೆ. ಇದರಿಂದ ಕ್ರೀಡೆಯನ್ನು ತಮ್ಮ ವೃತ್ತಿಜೀವನವಾಗಿಸಿ ದನಲಾಭ ಪಡೆಯುತ್ತಾರೆ. ಚಂದ್ರ ಲಘ್ನದಲ್ಲಿ ಏಕದಶೆ ಇದೆ. ಲಗ್ನೇಶ ಬುಧ ಪಂಚಮಹಾಪುರಷ ಯೋಗದಿಂದ ಒಂದು ಭದ್ರ ಯೋಗ ಆಗಿ ದಶಮ ಭಾವದಲ್ಲಿ ದ್ವಾದಶಿ ಸೂರ್ಯನ ಸಮೀಪ ಬುಧಾದಿತ್ಯ ಆಗಿ ರಾಜ್ಯ ಭಾವ, ಕರ್ಮ ಭಾವದಲ್ಲಿ ಕುಳಿತಿದ್ದಾನೆ. ಇದು ಧೋನಿಯವರಿಗೆ ಭದ್ರಯೋಗ, ಉತ್ತಮ ಬುದ್ಧಿವಂತಿಕೆ ನೀಡಿತು. ಅದೇ ಗುರು ಲಘ್ನದಲ್ಲಿ ವಿರಾಜಿಸಿದ್ದಾನೆ. ಇದರಿಂದ ಶೀಘ್ರ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯದೊಂದಿಗೆ ಚಂದ್ರನು ಭಾಗ್ಯೇಶ ಶುಕ್ರ ಅಥವಾ ರಾಹುವಿನ ಪ್ರಭಾವದೊಂದಿಗೆ ನಾಯಕತ್ವ ಸಾಮರ್ಥ್ಯವನ್ನು ವೃದ್ಧಿಸುತ್ತಾನೆ.

ಚತುರ್ಥ ಭಾವ ಭೂಮಿ ಭಾವದೊಂದಿಗೆ ಸಂಬಂಧ ಹೊಂದಿರುತ್ತದೆ. ಅದೇ ಪ್ರಸಿದ್ಧಿಗೆ ಕಾರಣವಾಗುತ್ತದೆ. ಚತುರ್ಥ ಭಾವದ ಮೇಲೆ ಮಂಗಳನ ಮಿತ್ರ ದೃಷ್ಠಿ ಬೀಳುವುದರಿಂದ ಧೋನಿ ಕ್ರೀಡೆಯಲ್ಲಿ ಪ್ರಖ್ಯಾತರಾದರು. ಮಂಗಳನ ಮೇಲೆ ಗುರುವಿನ ಪೂರ್ಣ ದೃಷ್ಟಿ ಬೀಳುವುದರಿಂದ ಧೋನಿಯಲ್ಲಿ ಉತ್ಸಾಹದ ಕೊರತೆ ಇರಲಿಲ್ಲ. ಧೋನಿಯವರಿಗೆ ಈಗ ಏಳುವರೆ ಶನಿ ನಡೆಯುತ್ತಿದೆ. ಆದರೆ ಶುಭ ರಾಶಿ ಇರುವುದರಿಂದ ಧೋನಿ ಮೇಲೆ ಅದರ ಯಾವುದೇ ಪ್ರಭಾವ ಇರುವುದಿಲ್ಲ. ಮುಂದೆಯೂ ಅವರ ಭವಿಷ್ಯ ಕ್ರೀಡಾವಲಯದಲ್ಲಿ ಹಲವು ಯಶಸ್ಸುಗಳನ್ನು ತಂದುಕೊಡಲಿದೆ.

ವೆಬ್ದುನಿಯಾವನ್ನು ಓದಿ