ಸಾಧ್ವಿ ಅನಿಲ್ ಕುಂಬ್ಳೆ ಭವಿಷ್ಯ ಉತ್ತಮ

PTI
ಕನ್ನಡಿಗ ಅನಿಲ್ ಕುಂಬ್ಳೆ ಹುಟ್ಟಿದ್ದು 1970ರ ಅಕ್ಟೋಬರ್ 17ರಂದು. ಅವರ ಅದೃಷ್ಟ ಸಂಖ್ಯೆ 7 ಹಾಗೂ 9. ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದವರಲ್ಲಿ ಕನ್ನಡ ಕುವರ ಅನಿಲ್ ಕುಂಬ್ಳೆ ಜಗತ್ತಿನಲ್ಲಿ ಮೂರನೇಯ ಸ್ಛಾನದಲ್ಲಿದ್ದಾರೆ. ತಂಡದೊಂದಿಗೆ ಹೊಂದಾಣಿಕೆ, ವಿನಯ, ವಿಧೇಯತೆ, ಮುಂದಾಲೋಚನೆ, ಎಂತಹ ಸಂದರ್ಭದಲ್ಲಿ ಕೂಡಾ ತಾಳ್ಮೆಯನ್ನು ಕಳೆದುಕೊಳ್ಳದೇ ಪ್ರಶಾಂತವಾಗಿರುವುದು ಅನಿಲ್ ಕುಂಬ್ಳೆ ಮುಖ್ಯಗುಣ ಲಕ್ಷಣಗಳಾಗಿವೆ.

ಇತರರೊಂದಿಗೆ ತನ್ನ ಭಾವನೆ, ಅನುಭವಗಳನ್ನು ಹಂಚಿಕೊಳ್ಳುವುದು, ಉತ್ತಮ ಗೆಳೆಯರೊಂದಿಗೆ ಸ್ನೇಹದಿಂದಿರುವುದು ಕುಂಬ್ಳೆಯವರಿಗೆ ತುಂಬಾ ಇಷ್ಟವಾಗುತ್ತದೆ. ಗೊಂದಲಗಳು ಅನ್ಯಾಯ, ವಿವಾದ ಇವರಿಗೆ ಇಷ್ಟವಾಗುವುದಿಲ್ಲ. ಈ ಗುಣ ಲಕ್ಷಣಗಳು ಕುಂಬ್ಳೆಯವರಿಗೆ ಮಾತ್ರವಲ್ಲ. ಅಕ್ಟೋಬರ್ ತಿಂಗಳಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೆ ಇರುತ್ತವೆ. ಹುದ್ದೆ ಅಧಿಕಾರಗಳು ಹುಡುಕಿಕೊಂಡು ಬರುತ್ತವೆ. ಉತ್ತಮ ಪ್ರದರ್ಶನದ ಮೂಲಕ ಉತ್ತಮ ಹೆಸರುಗಳಿಸಲು ಪ್ರಯತ್ನಿಸುತ್ತಾರೆ.

ಗೆಲುವು ಸೋಲುಗಳನ್ನು ಸಮನಾಗಿ ಸ್ವೀಕರಿಸುವ ಗುಣವನ್ನು ಹೊಂದಿರುತ್ತಾರೆ. ಶರೀರ, ಮನಸ್ಸು ಮತ್ತು ಆರೋಗ್ಯ ಉತ್ಸಾಹದಿಂದ ಇರುತ್ತದೆ. ಬಂಧುಗಳು , ಸ್ನೇಹಿತರು ನೀಡಿದ ಪ್ರೋತ್ಸಾಹವನ್ನು ಅವರು ಎಂದಿಗೂ ಮರೆಯಲಾರರು. ಕುಂಬ್ಳೆಯವರೂ ಹೀಗೆಯೇ. ಮುಂದೆಯೂ ಕುಂಬ್ಳೆಯವರ ಪ್ರಯತ್ನಗಳು ಫಲಿತಗೊಂಡು ಅವರ ಭವಿಷ್ಯ ಅನುಕೂಲಕವಾಗಿರುತ್ತದೆ.

ವೆಬ್ದುನಿಯಾವನ್ನು ಓದಿ