40ರ ನಂತರ ಪ್ರಿಯಾಂಕಾ ಛೋಪ್ರಾಗೆ ಕೆಟ್ಟ ಗಳಿಗೆ!

IFM
ಮಾಜಿ ಭಾರತ ಸುಂದರಿ, ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ 1982ರ ಜುಲೈ 18ರಂದು ಜೆಮ್‌ಶೆಡ್‌ಪುರದಲ್ಲಿ ಜನಿಸಿದರು. ಲಗ್ನ ತುಲಾ. ತುಲಾ ಲಗ್ನದಲ್ಲಿ ಜನಿಸಿದವರು ಯಾವಾಗಲೂ ಸುಂದರರಾಗಿರುತ್ತಾರೆ. ಜತೆಜತೆಗೇ ಉತ್ತಮ ಶರೀರ ಹೊಂದಿದವರೂ ಆಗಿರುತ್ತಾರೆ. ಈಕೆಯ ರಾಶಿ ವೃಷಭ. ಹಾಗಾಗಿ ಈಕೆಯ ಗುಣವೂ ಉತ್ತಮ.

ಪ್ರಿಯಾಂಕಾಗೆ ಜಾತಕದಲ್ಲಿ ಕಾಳ ಸರ್ಪಯೋಗವಿದೆ. ಕೇತು ಉಚ್ಛ ಸ್ಥಿತಿಯಲ್ಲಿದ್ದಾನೆ. ಆದರೂ ನಂ.1 ನಟಿಯಾಗಲು ಅಷ್ಟು ಸುಲಭದಲ್ಲಿ ಸಾಧ್ಯವಾಗುವುದಿಲ್ಲ. ಆದರೆ ಹಣ ಯಾವಾಗಲೂ ಸುರಿಮಳೆಯಾಗುತ್ತದೆ. ಎಂದಿಗೂ ಹಣಕ್ಕೆ ಕೊರತೆಯಾಗುವುದಿಲ್ಲ.

ಗಮನಿಸಿ
  ಸದ್ಯದಲ್ಲೇ ವೆಬ್‌ದುನಿಯಾ ಕನ್ನಡದ ಓದುಗರ ಜ್ಯೋತಿಷ್ಯದ ಕುರಿತ ಸಂದೇಹಗಳಿಗೆ ಬೆಂಗಳೂರಿನ ಖ್ಯಾತ ಜ್ಯೋತಿಷಿಗಳು ಉತ್ತರಿಸಲಿದ್ದಾರೆ. ವಿವರಗಳಿಗೆ ಸದ್ಯವೇ ನಿರೀಕ್ಷಿಸಿ.      
ಅಷ್ಟಮೇಶ ಶುಕ್ರ ಒಂಭತ್ತನೇ ಭಾವದಲ್ಲಿ ಭಾಗ್ಯೇಶ ಬುಧ ಹಾಗೂ ಉಚ್ಛ ರಾಹುವಿನ ಜತೆಯಲ್ಲಿ ಇದ್ದುದರಿಂದ ಸದಾ ಈಕೆಗೆ ಭಾಗ್ಯದಲ್ಲಿ ಯಾವದೇ ಕೊರತೆಯಾಗದು. ಇದೇ ಕಾರಣದಿಂದ ಸುಶ್ಮಿತಾ ಸೇನ್‌ಗಿಂತಲೂ ಅಧಿಕ ಯಶಸ್ಸು ಪ್ರಿಯಾಂಕಾ ಛೋಪ್ರಾಗೆ ಸಿಕ್ಕಿತು. ಗೋಚರ ಗ್ರಹಗಳ ದೃಷ್ಟಿಯಿಂದ ನೋಡುವುದಾದರೆ, ಶನಿ ಸಿಂಹ ರಾಶಿಯಿಂದ ಸುತ್ತುಬರಲು ಆರಂಭಿಸಿರುವುದ್ದಾನೆ.

ಆದರೆ ಶನಿ ಕನ್ಯಾ ರಾಶಿಗೆ ಬಂದರೆ ಪ್ರಿಯಾಂಕಾಗೆ ತೊಂದರೆ ಆರಂಭವಾಗುತ್ತದೆ. ಜನ್ಮ ಲಗ್ನದಲ್ಲಿ ಶನಿ ಕನ್ಯಾ ರಾಶಿಯಲ್ಲಿ ಮಂಗಳ ಜತೆ ಇದ್ದಾನೆ. ಹೀಗೆ ಶನಿ ಮಂಗಳನ ಜತೆ ಇರುವ ಜಾತಕದವರಿಗೆ 40 ವರ್ಷಗಳ ಕಾಲ ಅತ್ಯುತ್ತಮ ಜೀವನ ದಕ್ಕಿದರೂ, ನಂರ ತೊಂದರೆಗಳು ಆರಂಭವಾಗುತ್ತವೆ. ಪ್ರಿಯಾಂಕಾಗೂ 40ರ ನಂತರ ಅಷ್ಟು ಉತ್ತಮ ಭವಿಷ್ಯವಿಲ್ಲ.ಮಂಗಳ ಸಪ್ತಮೇಶನಾಗಿರುವುದರಿಂದ ಪ್ರಿಯಾಂಕಾಗೆ ದಾಂಪತ್ಯದಲ್ಲೂ ಬಹಳ ಕಷ್ಟ ನಷ್ಟಗಳೇ ಎದುರಾಗುತ್ತದೆ. ಇದಕ್ಕೆ ಶನಿ- ಮಂಗಳನ ದೋಷಕ್ಕೆ ಕಾರಣವೇನೆಂದು ಕಂಡುಹಿಡಿದು ಅದಕ್ಕೆ ಪ್ರಾಯಶ್ಚಿತ್ತ ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ, ವಿವಾಹ ಜೀವನ ಭಾರೀ ವಿಸ್ಫೋಟದಲ್ಲಿ ಕೊನೆಗೊಳ್ಳುವ ಅಪಾಯವಿದೆ.

ವೆಬ್ದುನಿಯಾವನ್ನು ಓದಿ