ಶಿವನ ಪೂಜೆಗು ನಿಮ್ಮ ರಾಶಿಗು ಎತ್ತಣಿಂದೆತ್ತ ಸಂಬಂಧವಯ್ಯ ?

ಮಂಗಳವಾರ, 25 ಫೆಬ್ರವರಿ 2014 (11:12 IST)
PR
ಮಹಾಶಿವರಾತ್ರಿಗೂ ನಿಮ್ಮ ರಾಶಿಗು ಸಾಕಷ್ಟು ಸಂಬಂಧವಿದೆ. ರಾಶಿಗನುಗುಣವಾಗಿ ಶಿವನನ್ನು ಆರಾಧಿಸಿ.

ನಿಮ್ಮ ರಾಶಿಗನುಗುಣವಾಗಿ ಶಿವನನ್ನು ಪೂಜಿಸಿದರೆ ಸಾಕಷ್ಟು ವರಗಳು ಸಿಗಲಿವೆ ಎಂದು ಆಧ್ಯಾತ್ಮದ ಪುರಾತನ ಮೂಲಗಳು ತಿಳಿಸುತ್ತವೆ .

ಬನ್ನಿ ಯಾವ ಯಾವ ರಾಶಿಯವರು ಹೇಗೆ ಶಿವನನ್ನು ಪೂಜಿಸಬೇಕು ಎಂದು ತಿಳಿದುಕೊಳ್ಳೊಣ

PR
ಮೇಷ : ರಕ್ತ ಪುಷ್ಪದಿಂದ ಪೂಜೆಯನ್ನು ಸಲ್ಲಿಸಿ ಮತ್ತು ಜೇನಿನ ಅಭಿಷೇಕ ಮಾಡಿ. ಓಂ ನಮಃ ಶಿವಾಯ ಮಂತ್ರ ಪಠಿಸಿ.

PR
ವೃಷಭ: ಶ್ವೇತ ಪುಷ್ಪದಿಂದ ಶಿವನಿಗೆ ಪೂಜೆ ಮಾಡಿ ಮತ್ತು ಹಾಲಿನ ಅಭಿಷೇಕ ಮಾಡಿ. ಮಹಾಮೃತ್ಯುಂಜಯ ಮಂತ್ರ ಪಠಿಸಿ.

PR
ಮಿಥುನ : ಅರ್ಕ , ಧತುರಾದಿಂದ ಪೂಜೆ ಮಾಡಿ ಮತ್ತು ಹಾಲಿನ ಅಭಿಷೇಕ್ ಮಾಡಿ. ಶಿವ ಚಾಲೀಸ್‌ ಪಠಿಸಿ.

ಕರ್ಕ: ಶ್ವೇತ ಕಮಲದಿಂದ ಶಿವನಿಗೆ ಪೂಜೆಯನ್ನು ಸಲ್ಲಿಸಿ ಮತ್ತು ಹಾಲಿನ ಅಭಿಷೇಕ ಮಾಡಿ. ಲಿಂಗಾಷ್ಟಕ ಪಠಿಸಿ.
PR

PR
ಸಿಂಹ : ರಕ್ತ ಪುಷ್ಪ ಶಿವನಿಗೆ ಅರ್ಪಿಸಿ ಮತ್ತು ಪಂಚಾಮೃತದಿಂದ ಅಭಿಷೇಕ ಮಾಡಿ. ಶಿವ ಮಹಿಮೆಯ ಮಂತ್ರ ಪಠಿಸಿ.

PR
ಕನ್ಯಾ: ಹಸಿರು ಹೂ ಶಿವನಿಗೆ ಅರ್ಪಿಸಿ, ಸುಘಂದಿತ ಎಣ್ಣೆಯಿಂದ ಶಿವನಿಗೆ ಪೂಜೆ ಸಲ್ಲಿಸಿ ಮತ್ತು ಅಭಿಷೇಕ ಮಾಡಿ. ಶಿವ ಪುರಾಣವುಳ್ಳ ಶಿವನ ಕಥೆಗಳನ್ನು ಓದಿ .

PR
ತುಲಾ: ಶ್ವೇತ ಪುಷ್ಪ ಶಿವನಿಗೆ ಅರ್ಪಿಸಿ . ಹಾಲಿನ ಅಭಿಷೇಕ ಮಾಡಿ . ಮಹಾಕಾಲ ಸಹಸ್ರನಾಮ ಪಠಿಸಿ.

PR
ವೃಷಿಕ : ರಕ್ತ ಪುಷ್ಪ ಶಿವನಿಗೆ ಅರ್ಪಿಸಿ ಮತ್ತು ಸಾಸಿವೆ ಎಣ್ಣೆಯಿಂದ ಪೂಜೆ ಮತ್ತು ಅಭಿಷೇಕ ಮಾಡಿ. ಶಿವನ 108 ನಾಮಾವಳಿ ಓದಿ.

PR
ಧನು : ಹಳದಿ ಬಣ್ಣದಿಂದ ಪೂಜೆಯನ್ನು ಮಾಡಿ ಮತ್ತು ಸಾಸಿವೆ ಎಣ್ಣೆಯಿಂದ ಪೂಜೆಯನ್ನು ಮತ್ತು ಅಭಿಷೇಕ ಮಾಡಿ. 12 ಜ್ಯೋತಿರ್ಲಿಂಗವನ್ನು ಸ್ಮರಣೆ ಮಾಡಿ.

PR
ಮಕರ : ನೀಲಿ-ಕಪ್ಪು ಹೂವಿನಿಂದ ಶಿವನಿಗೆ ಪೂಜೆ ಮಾಡಿ ಮತ್ತು ಗಂಗಾಜಲದಿಂದ ಶಿವನಿಗೆ ಅಭಿಷೇಕ ಮಾಡಿ. ಶಿವ ಪಂಚಾಕ್ಷರಿ ಮಂತ್ರವನ್ನು ಪಠಿಸಿ.

PR
ಕುಂಭ : ನೇರಳೆ - ನೀಲಿ ಬಣ್ಣದ ಪುಷ್ಫ ಶಿವನಿಗೆ ಅರ್ಪಿಸಿ ಮತ್ತು ನೀರಿನ ಅಭಿಷೇಕ ಮಾಡಿ . ಶಿವ ಷಡಕ್ಷರಿ ಮಂತ್ರ 11 ಬಾರಿ ಪಠಿಸಿ.

PR
ಮೀನ : ಹಣದಿ ಬಣ್ಣದ ಹೂವು ಶಿವನಿಗೆ ಅರ್ಪಿಸಿ ಮತ್ತು ಸಿಹಿ ನೀರಿನ ಅಭಿಷೇಕ ಮಾಡಿ. ರಾವಣ ರಚಿಸಿದ ಶಿವ ತಾಂಡವವನ್ನು ಪಠಿಸಿ .

PR
ಶಿವನಿಗೆ ಬಿಲ್ವ ಪತ್ರೆ, ಭಂಗ್‌, ಅರ್ಕ ಪುಷ್ಪ, ಧತುರೆ ಪುಷ್ಪ ಮತ್ತು ಹಣ್ಣುಗಳನ್ನು ಶಿವನಿಗೆ ಅರ್ಪಿಸಿ.
ಯಾವ ವಸ್ತುಗಳು ಇರುವುದಿಲ್ಲವೋ , ಆಗ ಚಿಂತೆ ಮಾಡಬೇಡಿ. ಆ ಜಾಗದಲ್ಲಿ ಅಕ್ಷತೆಯನ್ನಿಡಿ.

PR
ಶಿವ ಪಂಚಾಕ್ಷರಿ ಮಂತ್ರ - ನಮಃ ಶಿವಾಯ
ಶಿವ ಷಡಕ್ಷರಿ ಮಂತ್ರ - ಓಂ ನಮಃ ಶಿವಾಯ
ಮೃತ್ಯುಂಜಯ ಮಂತ್ರ - ಓಂ ಜೂಂ ಸಃ
ಮಹಾಮೃತ್ಯುಂಜಯ ಮಂತ್ರ -
ತ್ರಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಮ್ |
ಉರ್ವಾರುಕಮಿವ ಬಂಧನಾತ್ |
ಮೃತ್ಯೋರ್ಮುಕ್ಷೀಯ ಮಾಮ್ಮೃತಾತ್ |
ಯೇ ತೇ ಸಹಸ್ರಮಯುತಂ ಪಾಶಾ ಮೃತ್ಯೋರ್ಮರ್ತ್ಯಾಯ ಹಂತವೇ |
ತಾನ್ ಯಜ್ಞಸ್ಯ ಮಾಯಾಯಾ ಸರ್ವಾನವಯಜಾಮಹೇ

ಈ ಮಂತ್ರಗಳನ್ನು ನೆನಪಿನಲ್ಲಿಡಿ ಪ್ರತಿ ಸಲ ಪೂಜೆ ಮಾಡುವಾಗ ಈ ಮಂತ್ರಗಳನ್ನು ಪಠಿಸಿ .

ವೆಬ್ದುನಿಯಾವನ್ನು ಓದಿ