ರಾಜ್ಯಕ್ಕೆ ಟಾಪರ್ ಆದ ದಿನಗೂಲಿಯ ಮಗಳು

ಗುರುವಾರ, 30 ಏಪ್ರಿಲ್ 2015 (16:40 IST)
ಸಗಟು ಬೀಡಿ ಮಾರಾಟದ ಅಂಗಡಿಯಲ್ಲಿ ದಿನಗೂಲಿ ಮಾಡುವ ಬಡ ವ್ಯಕ್ತಿಯೊಬ್ಬನ ಮಗಳು ಜಾರ್‌ಖಂಡ್ ಬೋರ್ಡ್‌ನ ಹನ್ನೆರಡನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನಗಳಿಸುವ ಮೂಲಕ ಸಾಧನೆಗೆ ಯಾವುದು ಕೂಡ ಅಡ್ಡಿಯಲ್ಲ ಎಂಬುದನ್ನು ತೋರಿಸಿ ಕೊಟ್ಟಿದ್ದಾಳೆ. 

12 ತರಗತಿಯ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನಗಳಿಸುವ ಮೂಲಕ ರೂಪಾ ಬಡ ತಂದೆತಾಯಿಗಳಿಗೆ ಕೀರ್ತಿ ತಂದಿದ್ದಾಳೆ. 
 
ದಿಯೋಗಢ್ ಜಿಲ್ಲೆಯ ನಿವಾಸಿಯಾದ ರೂಪಾ ಭವಿಷ್ಯದಲ್ಲಿ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗುವ ಗುರಿಯನ್ನು ಹೊತ್ತಿದ್ದಾಳೆ. 
 
ವರದಿಯಾಗಿರುವಂತೆ, ಮನೆಯಲ್ಲಿ ಯಾವುದೇ ಯಾವುದೇ ವ್ಯವಸ್ಥಿತ ಮೂಲಭೂತ ಸೌಲಭ್ಯಗಳನ್ನು, ಹೊಂದಿರದಿದ್ದರೂ ಸಹ ರೂಪಾ ಬೋರ್ಡ್ ಪರೀಕ್ಷೆಗಾಗಿ ಪರಿಶ್ರಮ ವಹಿಸಿ ಅಭ್ಯಾಸ ನಡೆಸಿದ್ದಳು. ರೂಪಾಳ ಸಂಪೂರ್ಣ ಕುಟುಂಬ ಆಕೆಯ ಸಾಧನೆಯಿಂದ ಅಭಿಮಾನ, ಸಂತೋಷವನ್ನು ವ್ಯಕ್ತಪಡಿಸಿದೆ.
 
ರೂಪಾ ಓದಿನಲ್ಲಷ್ಟೇ ಅಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲಿ ಸಹ ಸಕ್ರಿಯವಾಗಿದ್ದಾಳೆ ಎಂದು ಆಕೆಯ ನೆರೆಹೊರೆಯವರು ಹೇಳುತ್ತಾರೆ. 

ವೆಬ್ದುನಿಯಾವನ್ನು ಓದಿ