ಅಮೃತಸರ್ನಲ್ಲಿ ಇಂತಹ ಮಗುವೊಂದು ಹುಟ್ಟಿದ್ದು ಜನರಲ್ಲಿ ಕುತೂಹಲವನ್ನು ಕೆರಳಿಸಿದೆ. ಈ ರೀತಿಯ ಮಗು ಜನಿಸುವುದು ಅಪರೂಪವಾಗಿದ್ದು 6 ಲಕ್ಷಕ್ಕೊಬ್ಬ ಮಕ್ಕಳು ಈ ಸಮಸ್ಯೆಯೊಂದಿಗೆ ಹುಟ್ಟುತ್ತಾರೆ ಎಂದು ವೈದ್ಯರು ಹೇಳುತ್ತಾರೆ. ಪ್ಲಾಸ್ಟಿಕ್ ನವಜಾತ ಶಿಶುಗಳನ್ನು ವೈಜ್ಞಾನಿಕವಾಗಿ 'ಕೊಲಾಡಿಯನ್ ಬೇಬಿಸ್' ಎಂದು ಕರೆಯಲಾಗುತ್ತದೆ. ಗುರುನಾನಕ್ ದೇವ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ವೈದ್ಯರು ಶುಕ್ರವಾರ ಈ ಮಗುವನ್ನು ಪರೀಕ್ಷಿಸಿದ್ದಾರೆ.
"ಈ ಮಗುವನ್ನು ಯಾರಾದರೂ ಸ್ಪರ್ಶಿಸಿದ ಕೂಡಲೇ ಅದು ಅಳಲು ಆರಂಭಿಸುತ್ತದೆ. ರಬ್ಬರ್ ಗೊಂಬೆಯಂತೆ ಕಾಣುವ ಮಗುವಿನ ಮುಖ ಮೀನಿನಂತಿದೆ. ಕಣ್ಣು ಮತ್ತು ತುಟಿಗಳು ಗಾಢ ಕೆಂಪು ಬಣ್ಣದಲ್ಲಿವೆ. ಮಗು ಎದೆಹಾಲನ್ನು ಕುಡಿಯುವ ಸಾಮರ್ಥ್ಯವನ್ನು ಹೊಂದಿಲ್ಲ" , ಎಂದು ವೈದ್ಯರು ತಿಳಿಸಿದ್ದಾರೆ.