ಪೋಷಕರೇ ಹುಷಾರ್.. ಈ ಆನ್ ಲೈನ್ ಗೇಮ್ ನಿಮ್ಮ ಮಕ್ಕಳ ಪ್ರಾಣ ತೆಗೆಯಬಹುದು..?
ಭಾನುವಾರ, 30 ಏಪ್ರಿಲ್ 2017 (15:40 IST)
ಈಗಂತೂ ಸಂಪೂರ್ಣ ಡಿಜಿಟಲ್ ಜಮಾನ. ಎದ್ದರೂ ಕೂತರೂ ಮೊಬೈಲ್ ಕಂಪ್ಯೂಟರ್`ಗಳದ್ಧೆ ಹವಾ.. ಅದರಲ್ಲೂ ಪುಟ್ಟ ಮಕ್ಕಳು ಆನ್ ಲೈನ್ ಗೇಮ್`ಗಳಿಗೆಂದರೆ ಇನ್ನಿಲ್ಲದಂತೆ ತೊಡಗಿಕೊಳ್ಳುತ್ತಿದ್ಧಾರೆ. ರಷ್ಯಾದಲ್ಲಿ ಆನ್ ಲೈನ್ ಗೇಮ್ ಒಂದು ಮಕ್ಕಳ ಪ್ರಾಣ ತೆಗೆಯುತ್ತಿರುವ ಬಗ್ಗೆ ಸುದ್ದಿಯಾಗಿದೆ.
ಬ್ಲೂ ವೇಲ್ ಎಂಬ ಆನ್ ಲೈನ್ ಗೇಮ್ ಮಕ್ಕಳ ಜೀವಕ್ಕೇ ಕುತ್ತು ತಂದಿದೆಯಂತೆ. ದುರ್ಬಲ ಮನಸ್ಸಿನ ಹದಿ ಹರೆಯದ ಮಕ್ಕಳಿಗೆ ಗಂಬೀರ ಸವಾಲುಗಳನ್ನ ಇಲ್ಲಿ ಒಡ್ಡಲಾಗುತ್ತದೆಯಂತೆ. ಇದರಿಂದಾಗಿ ಮಕ್ಕಳು ತಮ್ಮ ಪ್ರಾಣಕ್ಕೇ ಸಂಚಕಾರ ತಂದುಕೊಳ್ಳುತ್ತಿದ್ದಾರಂತೆ.
ದಿನಕ್ಕೊಂದು ಟಾಸ್ಕ್ ರೀತಿ 50 ದಿನ 50 ಟಾಸ್ಕ್ ಇರುತ್ತವೆಯಂತೆ. ಮೊದಲಿಗೆ ಹಾರರ್ ಮೂವಿಗಳನ್ನ ನೋಡಿ ರಾತ್ರಿ ಎದ್ದು ಓಡಾಡುವ ಮತ್ತು ಸ್ವಯಂ ವಿಘಟಕ ಟಾಸ್ಕ್ ಇರುತ್ತವೆಯಂತೆ.
ಸ್ಪರ್ಧಾಳುಗಳಗಳನ್ನ ಬಲವಂತವಾಗಿ ವೇಲ್ ಶೇಪ್ ಪಡೆಯುವಂತೆ ಒತ್ತಾಯಿಸಲಾಗುತ್ತಂತೆ. ಒಂದು ಕೊನೆಯ ದಿನ ಾತ್ಮಹತ್ಯೆಯಂತಹ ಸವಾಲು ಹಾಕಲಾಗುತ್ತಂತೆ. 14 ವರ್ಷದ ಹುಡುಗಿಯರು ಈ ಗೇಮ್`ನಲ್ಲಿ ತಲ್ಲೀನರಾಗಿ 14 ಅಂತಸ್ತಿನ ಕಟ್ಟಡದಿಂದ ಧುಮುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮಕ್ಕಳನ್ನ ಈ ರೀತಿ ಸಾವಿಗೆ ನೂಕಿದ ಆನ್ ಲೈನ್ ಡೆತ್ ಗ್ರೂಪ್`ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬ್ರಿಟನ್ನಿನಲ್ಲೂ ಶಾಲಾ ಪ್ರಾಂಶುಪಾಲರು ಪೋಷಕರಿಗೆ ವಾರ್ನಿಂಗ್ ಮೆಸೇಜ್ ಕಳುಸಿದ್ದಾರಂತೆ,.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ