ಮದುವೆ ಶಾಸ್ತ್ರ ಮುಗಿಸಿ ದಿಬ್ಬಣ ವರನ ಮನೆಯನ್ನು ತಲುಪಿತ್ತು. ನವಜೋಡಿಗಳ ಪ್ರಥಮ ರಾತ್ರಿಗೆ ಕೋಣೆಯನ್ನು ಸಿಂಗರಿಸಲಾಗಿತ್ತು. ಅಷ್ಟರಲ್ಲಿ ವಧುವಿಗೆ ಪ್ರಸವ ವೇದನೆ ಪ್ರಾರಂಭವಾಗಿದೆ. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿಯೇ ಅವಳು ಮಗುವಿಗೆ ಜನ್ಮ ನೀಡಿದ್ದಾಳೆ. ಹಠಾತ್ ನಡೆದ ಈ ಘಟನೆ ವಧುವಿನ ಕಡೆಯವರಿಗೆ ಇರಿಸುಮುರಿಸು ತಂದಿದೆ. ಆದರೆ ಘಟನೆಯಿಂದ ಕ್ರೋಧಿತರಾದ ವರನ ಕಡೆಯವರು ವಧುವಿನ ಕಡೆಯವರನ್ನು ತರಾಟೆಗೆ ತೆಗೆದುಕೊಂಡರು.