ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ ಮಾಹಿತಿ ನೀಡದ ಗುಪ್ತಚರ ಸಂಸ್ಥೆ ವಿರುದ್ಧ ಸಿಎಂ ಗರಂ
ಗುರುವಾರ, 3 ಆಗಸ್ಟ್ 2017 (11:52 IST)
ಡಿ.ಕೆ. ಶಿವಕುಮಾರ್ ಮನೆ ಮೇಲಿನ ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ ಮಾಹಿತಿ ನೀಡದ ಗುಪ್ತಚರ ಇಲಾಖೆ ಬಗ್ಗೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸಿಆರ್`ಪಿಎಫ್ ರಾಜ್ಯಕ್ಕೆ ಬಂದರೂ ನಿಮಗೆ ಮಾಹಿತಿ ಸಿಗಲಿಲ್ಲವೇ..? ಗುಪ್ತಚರ ಇಲಾಖೆ ಏನು ಮಾಡ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಐಟಿ ಇಲಾಖೆ ರಾಜ್ಯ ಪೊಲೀಸರು ಸೇರಿದಂತೆ ಯಾವುದೇ ಸಂಸ್ಥೆಗೆ ಮಾಹಿತಿ ನೀಡದೇ ದಾಳಿ ನಡೆಸಿರುವುದು ಇದಕ್ಕೆ ಕಾರಣವಾಗಿದೆ. ರಾಜ್ಯ ಗುಪ್ತಚರ ಇಲಾಖೆಗೆ ಈ ಬಗ್ಗೆ ಸಣ್ಣ ಸುಳಿವೂ ಸಿಕ್ಕಿರಲಿಲ್ಲ ಎನ್ನಲಾಗಿದೆ.
ಈ ಮಧ್ಯೆ, ಅಧಿಕಾರಿಗಳ ಸಭ ನಡೆಸಿರುವ ಸಿಎಂ ಸಿದ್ದರಾಮಯ್ಯ ಇತರೆ ವಿಷಯಗಳ ಅಲರ್ಟ್ ಆಗಿರುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.ಈ ಮಧ್ಯೆ, ಇತರೆ ವಿಷಯಗಳ ಕುರಿತಂತೆ ಅಧಿಕಾರಿಗಳಿಂದ ಸಿಎಂ ಮಾಹಿತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.ಇತ್ತ, ಕೆಪಿಸಿಸಿ ಅಧ್ಯಕ್ಷರ ಜೊತೆಯೂ ಮಾತುಕತೆ ನಡೆಸಿರುವ ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮನೆ ಮೇಲಿನ ದಾಳಿ ಬಳಿಕ ರೆಸಾರ್ಟ್`ನಲ್ಲಿರುವ ಗುಜರಾತ್ ಶಾಸಕರ ಜವಾಬ್ದಾರಿಯನ್ನ ಬೇರೊಬ್ಬರಿಗೆ ವರ್ಗಾಯಿಸುವ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.