ಪಿಎಸ್ಐಯಿಂದ ಯುವತಿಯರಿಗೆ ಕಿರುಕುಳ
ವಿಜಯಪುರದ ಹೊರ್ತಿ ಠಾಣೆಯ ಪಿಎಸ್ಐ ಪ್ರಕಾಶ್ ರಾಠೋಡ ಅವರ ವಿರುದ್ಧ ಈ ಆರೋಪ ಕೇಳಿ ಬಂದಿದ್ದು, ಜಮಖಂಡಿಯ ಬನಹಟ್ಟಿ ಯುವತಿಯೊಬ್ಬರು ಬಾಗಲಕೋಟೆ ಎಸ್ಪಿಗೆ ದೂರು ನೀಡಿದ್ದಾರೆ.
ಪ್ರಕಾಶ್ ಅವರು ಬನಹಟ್ಟಿ ಠಾಣೆಯಲ್ಲಿ ಪಿಎಸ್ಐ ಆಗಿದ್ದಾಗ ಯುವತಿಯರಿಗೆ ಮೆಸೇಜ್ ಕಳುಹಿಸಿ ಫ್ರೆಂಡ್ಶಿಪ್ ಮಾಡುವಂತೆ ಹೇಳುತ್ತಿದ್ದರು. ವಿರೋಧಿಸಿದವರಿಗೆ ಗೂಂಡಾಗಳಿಂದ ಬೆದರಿಕೆ ಹಾಕಿಸುತ್ತಿದ್ದರು ಎಂದು ಯುವತಿ ಆರೋಪಿಸಿದ್ದಾರೆ