ಮನೆಯಲ್ಲಿಯೇ ಕೂತು ಪಾಸ್ ಪೋರ್ಟ್ ನವೀಕರಿಸುವುದು ಹೇಗೆ

Krishnaveni K

ಗುರುವಾರ, 19 ಡಿಸೆಂಬರ್ 2024 (10:38 IST)
ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಯಾವುದೇ ಕೆಲಸವನ್ನು ಮನೆಯಿಂದಲೇ ಕೂತು ಆನ್ ಲೈನ್ ಮೂಲಕ ಮಾಡುವ ವ್ಯವಸ್ಥೆಯಿರುತ್ತದೆ. ಪಾಸ್ ಪೋರ್ಟ್ ಕೂಡಾ ಅವುಗಳಲ್ಲಿ ಒಂದು. ನಿಮ್ಮ ಪಾಸ್ ಪೋರ್ಟ್ ನವೀಕರಿಸಬೇಕಿದ್ದರೆ ಆನ್ ಲೈನ್ ಮೂಲಕ ಮಾಡುವುದು ಹೇಗೆ ನೋಡಿ.

ಪಾಸ್ ಪೋರ್ಟ್ ಒಂದು ಪ್ರಮುಖ ಸರ್ಕಾರೀ ದಾಖಲಾತಿಯಾಗಿದೆ. ಇದನ್ನು ವಯಸ್ಕರಾಗಿದ್ದರೆ 10 ವರ್ಷಕ್ಕೊಮ್ಮೆ ನವೀಕರಿಸುತ್ತಿರಬೇಕು. 18 ವರ್ಷಕ್ಕಿಂದ ಕೆಳಗಿನ ವಯಸ್ಸಿನವರು 5 ವರ್ಷಕ್ಕೊಮ್ಮೆ ನವೀಕರಿಸಿಕೊಳ್ಳಬೇಕು. ಪಾಸ್ ಪೋರ್ಟ್ ನವೀಕರಿಸಲು ಯಾವುದೇ ಕಚೇರಿಗೆ ಅಲೆದಾಡಬೇಕಾಗಿಲ್ಲ.

ಪಾಸ್ ಪೋರ್ಟ್ ನವೀಕರಿಸುವ ವಿಧಾನ
Passport seva portal ಗೆ ಹೋಗಿ ನೋಂದಣಿ ಮಾಡಿಕೊಳ್ಳಬೇಕು
ನಿಮ್ಮ ವಿವರಗಳನ್ನು ನೀಡಿ ಲಾಗಿನ್ ಆಗಬೇಕು
Apply for Fresh Passport/Reissue of Passport ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ
ಪಾಸ್ ಪೋರ್ಟ್ ನವೀಕರಿಸುವ ಅಪ್ಲಿಕೇಷನ್ ಭರ್ತಿ ಮಾಡಿ
ಅಲ್ಲಿ ಕೇಳುವ ದಾಖಲೆಗಳನ್ನು ಅಪ್ ಲೋಡ್ ಮಾಡಿ
ಪಾಸ್ ಪೋರ್ಟ್ ನವೀಕರಣ ಶುಲ್ಕ ಪಾವತಿಸಿ
ನಿಮ್ಮ ಹತ್ತಿರದ ಪಾಸ್ ಪೋರ್ಟ್ ಕೇಂದ್ರವನ್ನು ಆಯ್ಕೆ ಮಾಡಿ
ಅಪ್ಲಿಕೇಷನ್ ರಸೀದಿಯ ಪ್ರತಿ ತೆಗೆದಿಟ್ಟುಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ