ಒಲವೆಂಬ ಸೆಲೆಯಲ್ಲಿ ಭಾವ ನೂರಾರು!

ಸೋಮವಾರ, 1 ಅಕ್ಟೋಬರ್ 2018 (18:23 IST)
ಹೌದು ಪ್ರೀತಿಗೆ ನಮ್ಮ ಲಹರಿಗೆ ತಕ್ಕ ಹಾಗೇ ಅರ್ಥ ಕಲ್ಪಿಸಿ ಬಿಟ್ಟಿದ್ದೇವೆ.
ಇಲ್ಲಿ ಪ್ರೀತಿ ಯಾವುದು, ವಾಂಛೆ ಯಾವುದು ಅನ್ನುವುದರ ಅರಿವಿಲ್ಲದೆ ಎಡುವುತ್ತಿದ್ದೇವೆ!!
 
ಅಂದು ಅದು ಕಾಲೇಜಿನ ದಿನಗಳು...
ಗುಂಗುರು ಕೂದಲು, ಪುಟಾಣಿ ಕಣ್ಣುಗಳು, ಹುಡುಗರನ್ನ ನೋಡಿದ್ರೆ ಮಾರು ದೂರ ಓಡುವ ಮುಗ್ಧ, ಸ್ನಿಗ್ಧ ಚೆಲುವೆ ಮನಸ್ಸಿನ ಮೂಲೆಯಲ್ಲಿ ಸದ್ದಿಲ್ಲದೇ, ಬಂದು ಕುಳಿತು ಬಿಡುತ್ತಾಳೆ.
 
ಮೊಬೈಲ್ ಮಾತು, ಪಾರ್ಕು, ಹೋಟೆಲು, ಬಿಗಿದಪ್ಪಿದ ಮುದ್ದಾಟ ಸ್ವರ್ಗಕ್ಕೆ ಮೂರೇ ಗೇಣು.
ಅಲ್ಲೇಲ್ಲೊ ಹಳಿ ತಪ್ಪಿ ಹೊಂದಾಣಿಕೆ ಇಲ್ಲದೆ,  ಖಾಲಿ ಆ ಕ್ಷಣದ ಆಸೆ, ಖುಷಿಗಾಗಿಯೇ ಇದ್ದ ಪ್ರೀತಿಯ ಅಂತ್ಯ!!
ನಿಜ ಆ ಪ್ರೀತಿಗೆ ಒಂದು ಗುರಿ ಇಲ್ಲ, ಅವಳು ನನ್ನಾಕೆ ಅಂತಾ ಗಟ್ಟಿ ಹೇಳುವ ಗಡಸುತನ ಇಲ್ಲ.
ಮುಂದೆ ಒಂದಾಗಿ ಬದುಕು ಕಟ್ಟಿಕೊಳ್ಳುವ ಯಾವ ಧೃಡ ವಿಶ್ವಾಸವು ಇಲ್ಲ, ಕಾರಣ ನಾವು ಮೆಚ್ಯೂರ್ ಆಗಿರಲ್ಲ.ಕಾಡಿ ಬೇಡಿದರು ಮತ್ತೆ ಒಂದಾಗುವುದಿಲ್ಲ ಅಲ್ಲಿರುವುದು ಅಭದ್ರತೆಯ ಭಾವ. ಇದನ್ನು ಪ್ರೀತಿ ಅನ್ನಬೇಕಾ??!!
 
ಅದೇ ಇಂದು ನನ್ನ ಹೊಟ್ಟೆ-ಬಟ್ಟೆಗೆ ಸಾಕಾಗುವ ಉದ್ಯೋಗ, ಕಾರು, ಬೈಕು, ಸಮಾಜದಲ್ಲಿ ನೆಲೆ ಕಂಡುಕೊಂಡ ಮೇಲೆ...
ಸದಾ ಮೌನಿ,ಕೃಷ್ಣ ಸುಂದರಿ, ತೆಳ್ಳಗಿನ ಹುಡುಗಿ ಬರ ಸೆಳಿತಾಳೆ.
ಸ್ನೇಹ ಪ್ರೀತಿಯಾಗಿ ಹೆಜ್ಜೆ-ಹೆಜ್ಜೆಗೂ ಜೊತೆಯಿರುತ್ತಾಳೆ.
"ನೋಡು ಇವುಳೇ...ನನಗೆ ತಂಗಿಗೆ ಮದುವೆ ಮಾಡಬೇಕು, ಅದಕ್ಕೆ ಸಾಲ ಮಾಡಬೇಕು.
ಕಾರ್ ಇದೆ, ಬೈಕಿದೆ ಅವುಗಳ ಸಾಲ ಬ್ಯಾಂಕ್ ಅಲ್ಲಿ ಹಾಗೇ ಇದೆ.
ಮುಂದೆ ಮನೆ ಕಟ್ಟುವ ಯೋಚನೆ ಇದೆ ಅದು ಸಾಲವೇ.
ನಾನು ಇಷ್ಟೆಲ್ಲಾ ಸಾಲ ಮಾಡಿ ಮದುವೆ ಆಗೋವಾಗ ಇನ್ನು ಎರಡು-ಮೂರು ವರ್ಷ ಹೋಗಬಹುದು, ನೀನ್ಯಾಕೆ ನಿನ್ನ ಜೀವನ ಹಾಳು ಮಾಡ್ಕೊತೀಯಾ, ಒಬ್ಬ ಒಳ್ಳೆ ಹುಡುಗನ್ನ ನೋಡಿ ಮದುವೆ ಆಗಿ ಸುಖವಾಗಿರು ಅಂದ್ರೆ".
"ಇಲ್ಲ ಕಣೋ ನಾನು ನಿನ್ನ ಇಷ್ಟ ಪಟ್ಟಿದ್ದಿನಿ, ಮದುವೆ ಅಂತಾದ್ರೆ ನಿನ್ನನ್ನೆ. ನಾನು ಕಾಯ್ತಿನಿ ನಿನಗೋಸ್ಕರ ಅಂತಾಳೆ"!!
ಇದು ಹೊಂದಾಣಿಕೆ. ಪ್ರೀತಿಗೆ ಇರಬೇಕಾದದ್ದೇ ಅದು.
ಇದು ಮೆಚ್ಯೂರಡ್ ಲವ್.
ಒಂದು ನಂಬಿಕೆ ಇದೆ,  ಇಂದಲ್ಲ ನಾಳೆ ಸಿಕ್ಕೆ ಸಿಗ್ತಿವಿ ಅನ್ನೊ ವಿಶ್ವಾಸವಿದೆ. ಭವಿಷ್ಯದ ಬಗ್ಗೆ ಒಂದಷ್ಟು ಕನಸಿದೆ. ಕಾರಣ ಒಂದು ಭದ್ರತೆಯ ಭಾವವಿದೆ.
 
ಅವಳ ಬಿಗಿದಪ್ಪುಗೆಯಲ್ಲಿ ಕಾಮದ ಬಯಕೆ ಇದ್ದರೆ ಅದು ಬಹಳ ಕಾಲ ಬದುಕಲ್ಲ.
ಆ ಅಪ್ಪುಗೆಯಲ್ಲಿ ಆಸೆಯ ಗೋಪುರ ಕಟ್ಟಿ ಆಗಸ ನೋಡುತ್ತಾ ಕನಸು ಕಟ್ಟುತ್ತಿವಲ್ಲ ಅದು ನಿಜ ಪ್ರೇಮದ ಉತ್ತುಂಗ.
ಪ್ರೀತಿ ಹೈಸ್ಕೂಲ್  ನಲ್ಲೂ ಆಗುತ್ತೆ, ಪಿ.ಯು.ಸಿಯಲ್ಲೂ ಆಗುತ್ತೆ, ಪದವಿ, ಉದ್ಯೋಗದಲ್ಲೂ ಕೂಡ ಮರುಕಳಿಸುತ್ತೆ.
ಅವುಗಳ ನಡುವಿನ ವ್ಯತ್ಯಾಸ ತಿಳಿಯಿರಿ. ಅವಳಲ್ಲದಿದ್ರೆ ಇನ್ನೊಬ್ಬಳು ಅನ್ನುವುದೇ ಪ್ರೀತಿಯಲ್ಲಿಲ್ಲ.
ಪ್ರೀತಿ ಚಲಿಸುವ ಮೋಡವಾಗಬಾರದು.
ಪ್ರೀತಿ  ನಿಂತು ಮಳೆ ಸುರಿಸುವ ಮೋಡವಾಗಬೇಕು.
ಅವಳ ಕೈಹಿಡಿದು ನಡೆಯುವಾಗ ಒಂದು ಭದ್ರತೆ ಜೊತೆಗಿದಂತೆ ಭಾಸವಾಗಬೇಕು.
ನಿಮ್ಮ ಯೌವನದ ವಾಂಛೆ, ಆಸೆಗಳಿಗೆ ಪ್ರೀತಿಯ ಹೆಸರಿಟ್ಟು ಕರೆಯಬೇಡಿ.
ಪ್ರೀತಿಗೆ ಅದರದ್ದೆ ಆದ ಭಾವನೆ ಇದೆ.
ನಿಮ್ಮ ಯೌವನದ ಪ್ರೀತಿ ನೂರಕ್ಕೆ ತೊಂಬತ್ತೊಂಬತ್ತು ವಿಫಲವೇ.ಸಿಕ್ಕಿದ್ದೆ ಆದ್ರೆ ಅದು ಸಿಕ್ಕಿ ಬಿದ್ದು!!
 
ಜೀವನದಲ್ಲಿ ನೆಲೆ ಕಂಡುಕೊಳ್ಳುವ ಛಲ ಮೂಡಿಸುತ್ತಲ್ಲ, 
ಅವಳನ್ನು ಪಡೆದೇ ಪಡೆಯುತ್ತೇನೆ ಅನ್ನೋ ಹಠ ಕಲಿಸುತ್ತಲ್ಲ ಅಂತಾ ಪ್ರೀತಿ ನಮ್ಮದಾಗಬೇಕು.
ಸಿನಿಮಾದಲ್ಲಿ ತೋರಿಸುವ ಬಣ್ಣದ ಪ್ರೇಮವೇ ಬೇರೆ, ವಾಸ್ತವವೇ ಬೇರೆ.
ಒಮ್ಮೆ ಮನಸ್ಸು ಕೊಟ್ಟ ಮೇಲೆ ಕನಸಿನ ಬೆನ್ನತ್ತಿ ಹೊರಡಿ.
ಅವಳು ನಿಮ್ಮಾಕೆ ಆಗೇ ಆಗುತ್ತಾಳೆ.
 
 - ಸಮರ್ಥ ಶೆಟ್ಟಿ ಯಡ್ತಾಡಿ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ