ಆಸ್ಪತ್ರೆಗೆ ದಾಖಲಾದ ಕಾಳಿಂಗ ಸರ್ಪ

ಬುಧವಾರ, 25 ಮಾರ್ಚ್ 2015 (11:52 IST)
ಆರೋಗ್ಯ ಕೆಟ್ಟು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕಾಳಿಂಗ ಸರ್ಪ ಒಂದನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಈ ಘಟನೆ ಬಿಹಾರದಲ್ಲಿ ನಡೆದಿದ್ದು ಹಾವು 12 ಅಡಿ ಉದ್ದವಿದ್ದು,3.5 ಕಿಲೋ ತೂಕವಿದೆ.

ಅಸ್ವಸ್ಥಗೊಂಡ ಹಾವಿಗೆ ಆಸ್ಪತ್ರೆಗೆ ದಾಖಲಿಸಿ ಈ ಚಿಕಿತ್ಸೆ ನೀಡುತ್ತಿರುವುದು ಇದೇ ಮೊದಲು ಎಂದು ಉರಗಕ್ಕೆ ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.
 
ತೀವೃ ಬಳಲಿದ್ದ ಉರಗಕ್ಕೆ ಗ್ಲುಕೋಸ್ ಡ್ರಿಪ್ಸ್ ನೀಡಲಾಯಿತಲ್ಲದೆ, ಟ್ಯೂಬ್ ಮೂಲಕ ಮೊಟ್ಟೆಯ ಬಿಳಿಭಾಗವನ್ನು ಆಹಾರವಾಗಿ ಬಾಯಿಗೆ ಹಾಕಲಾಯಿತು. ನಂತರ ಆರೋಗ್ಯದಲ್ಲಿ ಸುಧಾರಣೆ ಕಂಡ ಹಾವನ್ನು ವನವಿಹಾರಕ್ಕೆ ಬಿಡಲಾಯಿತು ಎಂದು ತಿಳಿದು ಬಂದಿದೆ. 
 
ವನ್ಯಜೀವಿ ಚಿಕಿತ್ಸಕ ಅತುಲ್ ಗುಪ್ತಾರವರ ಪ್ರಕಾರ ಕೋಬ್ರಾ ಒಂದು ತಿಂಗಳಿಂದ ಅಸ್ವಸ್ಥಗೊಂಡಿತ್ತು. ಮಂಗಳವಾರ ಅದಕ್ಕೆ ತಿನ್ನಲ್ಲೆಂದು ಕೆಂಪು ಹಾವನ್ನು ನೀಡಲಾಗಿತ್ತು. ಆದರೆ ಅವುಗಳ ನಡುವೆ ಜಗಳವಾಗಿ ಕೋಬ್ರಾಗಿದ್ದ ಒಂದು ಹಲ್ಲು ಕೂಡಾ ಮುರಿದು ಹೋಯಿತು.
 
2010 ಭೋಪಾಲ್ ಸ್ಟೇಷನ್‌ನಲ್ಲಿ ಈ ಹಾವನ್ನು ಹಾವಾಡಿಗರಿಂದ  ವಶಪಡಿಸಿಕೊಳ್ಳಲಾಗಿತ್ತು. ಆಗ ಅದಕ್ಕೆ 14 ವರ್ಷ ವಯಸ್ಸಾಗಿತ್ತು . ಅದನ್ನು ವನವಿಹಾರದಲ್ಲಿ ಬಿಡಲಾಗಿತ್ತು. 

ವೆಬ್ದುನಿಯಾವನ್ನು ಓದಿ