ಬರ್ಗರ್ ಪ್ರಿಯರಿಗೆ ಕೇಳಲು ಅಸಹ್ಯವಾಗುವ ಸಂಗತಿಯಿದು. ಪಾಸ್ಟ್ಪುಡ್ ತಿಂಡಿಗೆ ಖ್ಯಾತವಾಗಿರುವ ಮ್ಯಾಕ್ ಡೊನಾಲ್ಡ್ ರೆಸ್ಟೋರೆಂಟ್ ಒಂದಕ್ಕೆ ಬಂದಿದ್ದ ಅನ್ನಾ ಸೋಫಿಯಾ ಎಂಬ ಮಹಿಳೆಯೊಬ್ಬರು ಬರ್ಗರ್ನ್ನು ಆರ್ಡರ್ ಮಾಡಿದ್ದಾರೆ. ಪಾರ್ಸಲ್ ಕಟ್ಟಿಕೊಂಡು ಮನೆಗೆ ಬಂದು ತಿನ್ನುತ್ತಿದ್ದಾಗ ಏನೋ ಸಿಕ್ಕಿದಂತಾಗಿದೆ. ಅದನ್ನು ಹೊರಗೆ ತೆಗೆದು ನೋಡಿದಾಗ ತಾನು ಬಾಯಲ್ಲಿ ಹಾಕಿ ಕಚ್ಚಿದ್ದು ಜಿರಳೆ ಎಂದು ಆಕೆಗೆ ಗೊತ್ತಾಗಿದೆ. ಇದರಿಂದ ಸಿಟ್ಟಿಗೆದ್ದ ಮಹಿಳೆಯ ಮ್ಯಾಕ್ ಡೋನಾಲ್ಡ್ ವಿರುದ್ಧ ದೂರು ದಾಖಲಿಸಿದ್ದಾಳೆ. ಅರ್ಧ ಬರ್ಗರ್ನ್ನು ತನಿಖೆಗಾಗಿ ಆಕೆ ಮ್ಯಾಕ್ ಡೊನಾಲ್ಡ್ಗೆ ಹಿಂತಿರುಗಿಸಿದ್ದು, ಆರೋಗ್ಯ ಅಧಿಕಾರಿಗಳು ರೆಸ್ಟೋರೆಂಟ್ಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.