ನವವಿವಾಹಿತರಿಗೆ ಕಾಂಡೋಮ್ ಗಿಫ್ಟ್

ಬುಧವಾರ, 5 ಜುಲೈ 2017 (09:58 IST)
ಭೋಪಾಲ್: ಹೊಸದಾಗಿ ಮದುವೆಯಾದವರಿಗೆ ಏನು ಉಡುಗೊರೆ ಕೊಡಬಹುದು? ಹಾಗೆಂದ ತಕ್ಷಣ ನಿಮಗೆ ಸೀರೆ, ಒಡವೆ, ಪಾತ್ರೆ ಸಾಮಾನು ಹೀಗೇ ಏನಾದರೂ ಹೊಳೆಯುತ್ತದಲ್ಲಾ? ಆದರೆ ಮಧ್ಯಪ್ರದೇಶದಲ್ಲಿ ಮಾತ್ರ ನವವಿವಾಹಿತರಿಗೆ ವಿಶಿಷ್ಟ ಗಿಫ್ಟ್ ನೀಡಲಾಗುತ್ತಿದೆ!


ಅದೂ ಸರ್ಕಾರದ ವತಿಯಿಂದಲೇ. ಅಂತಹದ್ದೇನದು ಗಿಫ್ಟ್ ಅಂತೀರಾ? ಮಧ್ಯ ಪ್ರದೇಶದ ಯಾವುದೇ ನಗರ ಅಥವಾ ಗ್ರಾಮಗಳಲ್ಲಿ ಇದೀಗ ಆರೋಗ್ಯ ಕಾರ್ಯಕರ್ತರು ನವವಿವಾಹಿತರಿಗೆ ಕಾಂಡೋಮ್ ಉಡುಗೊರೆಯಾಗಿ ನೀಡುತ್ತಿದ್ದಾರೆ.

ಹೆಚ್ಚುತ್ತಿರುವ ಗರ್ಭಪಾತ ಪ್ರಮಾಣ ಮತ್ತು ಗರ್ಭನಿರೋಧಕ ಮಾತ್ರೆಗಳಿಂದ ಮಕ್ಕಳನ್ನು ಹಡೆಯುವ ಸಾಮರ್ಥ್ಯ ಕುಂಠಿತವಾಗುತ್ತಿರುವುದನ್ನು ತಡೆಯಲು ಸರ್ಕಾರವೇ ಇಂತಹದ್ದೊಂದು ಕ್ರಮ ಕೈಗೊಂಡಿದೆ. ಸಮೀಕ್ಷೆಯ ವರದಿಯೊಂದನ್ನು ಆಧರಿಸಿ ಸರ್ಕಾರದ ಆರೋಗ್ಯ ಇಲಾಖೆ ಇಂತಹದ್ದೊಂದು ವಿಶಿಷ್ಟ  ಅಭಿಯಾನ ಆರಂಭಿಸಿದೆ.

ಸಮೀಕ್ಷೆಯ ಪ್ರಕಾರ ಕಾಂಡೋಮ್ ಬಳಸುವವರ ಸಂಖ್ಯೆ ಇತ್ತೀಚೆಗೆ ಗಣನೀಯವಾಗಿ ಕುಸಿದಿದೆ. ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸುವವರೂ ಕಡಿಮೆಯಾಗಿದ್ದಾರೆ. ಹೀಗಾಗಿ ನವವಿವಾಹಿತರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಕಾಂಡೋಮ್ ಕಾರ್ಯಕ್ರಮ ಹಮ್ಮಿಕೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ