ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಜಾಡು ಹಿಡಿದಷ್ಟು ಕಗ್ಗಂಟು

ಬುಧವಾರ, 19 ಅಕ್ಟೋಬರ್ 2016 (09:12 IST)

ಹಾನಗಲ್ಲ: ಕಳೆದ ನಾಲ್ಕು ತಿಂಗಳ ಹಿಂದೆ ರಾಜ್ಯಾದ್ಯಂತ ಕೋಲಾಹಲ ಎಬ್ಬಿಸಿದ್ದ ಪಿಯು ರಸಾಯನ ಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾನಗಲ್ಲ ಉಪ ನೋಂದಣಾಧಿಕಾರಿ ಕಚೇರಿ ಸಿಬ್ಬಂದಿ ಸಂತೋಷ ಅಗಸಿಮನಿಯನ್ನು ಸಿಬಿಐ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.
 

ಮಂಗಳವಾರ ಸಾಯಂಕಾಲ ಸಂತೋಷ ಕಾರ್ಯ ನಿರ್ವಹಿಸುತ್ತಿದ್ದ ಕಚೇರಿಗೆ ತೆರಳಿದ ಸಿಬಿಐ ತಂಡ, ಅವರನ್ನು ವಶಕ್ಕೆ ಪಡೆದು ಪಸ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಕೂಲಂಕಷ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸಂತೋಷ ಶಿಕ್ಷಕ ಎಫ್.ಎಚ್. ಬಾಲಹನುಮಣ್ಣನವರ ಹೆಸರನ್ನು ಬಾಯಿಬಿಟ್ಟಿದ್ದು, ಪ್ರಕರಣ ಇನ್ನೊಂದು ತಿರುವು ಪಡೆದಿದೆ.
 

ಸಂತೋಷ ಅವರಿಂದ ಕೆಲವಷ್ಟು ಪೂರಕ ಮಾಹಿತಿ ಪಡೆದ ಸಿಬಿಐ ಅಧಿಕಾರಿಗಳು ಹಾನಗಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳಿ ಶಿಕ್ಷಕ ಬಾಲಹನುಮಣ್ಣನವರ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. 2013ರಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲೂ ಬಾಲಹನುಮಣ್ಣನವರು ಭಾಗಿಯಾಗಿದ್ದರು ಎನ್ನುವ ಗಮನಾರ್ಹ ವಿಷಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಾಲಹನುಮಣ್ಣನವರಿಗೆ ಯಾವುದೇ ರಜೆ ನೀಡದಂತೆ ಸಿಬಿಐ ಅಧೀಕಾರಿಗಳು ಬಿಇಓ ಅವರಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ