ಇಂದಿನ ರಾತ್ರಿ ಶತಮಾನದ ಅತಿ ದೊಡ್ಡ ಚಂದ್ರನನ್ನು ನೋಡದೇ ಇರಬೇಡಿ

ಸೋಮವಾರ, 14 ನವೆಂಬರ್ 2016 (16:47 IST)
ಹೌದು, ಇಷ್ಟು ವರ್ಷಗಳ ಕಾಲ ಚಂದ್ರನನ್ನು ಸಣ್ಣದಾಗಿ ದೂರದಿಂದ ನೋಡುತ್ತಿದ್ದೇವು. ಆದರೆ ಇಂದು ಪವಿತ್ರ ಕಾರ್ತಿಕ ಹುಣ್ಣಿಮೆಯ ದಿನದಂದು ಅಂದರೆ 21ನೇ ಶತಮಾನದ ಅತಿ ದೊಡ್ಡ ಚಂದ್ರನನ್ನು ನೋಡುವ ಅವಕಾಶ ನಮ್ಮೆಲ್ಲರ ಪಾಲಿಗೆ. ಇಂದು ಚಂದ್ರ, ಭೂಮಿಯ ಹತ್ತಿರಕ್ಕೆ ಬರಲಿದ್ದಾನೆ. ಹತ್ತರದಿಂದ ಆತನನ್ನು ಕಣ್ತುಂಬಿಸಿಕೊಳ್ಳುವ ಅಪರೂಪದ ಅವಕಾಶ ನಮಗೆ ಸಿಗಲಿದೆ.

ಇಂದು ಚಂದ್ರನನ್ನು ಇಷ್ಟು ದಿನ ನೋಡಿದ ಗಾತ್ರಕ್ಕಿಂತ ಶೇ. 14 ರಷ್ಟು ದೊಡ್ಡದಾಗಿ ಕಾಣಬಹುದಲ್ಲದೆ, ಶೇ. 30ರಷ್ಟು  ಹೆಚ್ಚು ಪ್ರಕಾಶಮಾನವಾಗಿಯೂ ನೋಡಬಹುದು. ಇದೊಂದು ಅದ್ಭುತ ಕ್ಷಣವಾಗಲಿದೆ. ಸುಂದರ ಹಾಗೂ ಅತ್ಯಂತ ಹೊಳಪುಳ್ಳ ಚಂದ್ರನನ್ನು ನೋಡಬೇಕೆಂದರೆ ಅತ್ಯಂತ ಎತ್ತರ ಸ್ಥಳಕ್ಕೆ ಸ್ಥಳಕ್ಕೆ ತೆರಳುವುದು ಒಳ್ಳೆಯದು.
 
ಅಂದಹಾಗೆ, ಮತ್ತೆ ಈ ಅವಕಾಶ 2034ರ ನವೆಂಬರ್ 25 ರಂದು ದೊರೆಯಲಿದೆ ಎನ್ನುವುದು ಮತ್ತೊಂದು ವಿಶೇಷ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ