ಹೌದು, ಕಾಶ್ಮೀರದಲ್ಲಿ ಹಸುವೊಂದು ವೃತ್ತಿ ಶಿಕ್ಷಣ ಪ್ರವೇಶ ಪರೀಕ್ಷೆ ಬರೆಯಲು ಅರ್ಹತೆ ಗಿಟ್ಟಿಸಿದೆ. ಬರುವ ಮೇ 10ರಂದು ಈ ಹಸು ಡಿಪ್ಲೋಮೋ ಇನ್ ಪಾಲಿಟೆಕ್ನಿಕ್ ಪರೀಕ್ಷೆ ಬರೆಯಲಿದೆ. ಪರೀಕ್ಷೆ ಬರೆಯಲು ಬೋರ್ಡ್ಆಫ್ ಪ್ರೊಫೆಶನಲ್ ಎಂಟ್ರೆನ್ಸ್ ಎಕ್ಸಾಮಿನೇಷನ್ ( ಬಿಒಪಿಇಇ) ಹಸುವಿಗೆ ಪ್ರವೇಶ ಪತ್ರವನ್ನು ನೀಡಿದೆ. ಬೆಮಿನಾದ ಸರಕಾರಿ ಪದವಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಈ ಆಕಳಿಗೆ ಅವಕಾಶ ಕಲ್ಪಿಸಲಾಗಿದೆ.
"ಈಗ ಎಲ್ಲಾ ಅರ್ಜಿಗಳನ್ನು ಆನ್ಲೈನ್ ಮಾಡಲಾಗಿದೆ. ಮಾನವ ಮುಖ ಮತ್ತು ಪ್ರಾಣಿಯ ಮುಖವೆಂದು ಬೇರ್ಪಡಿಸಲು ಗುರುತಿಸುವಿಕೆ ತಂತ್ರಾಂಶ ಇಲ್ಲ. ಯಾರೋ ತಮಾಷೆಗಾಗಿ ಈ ರೀತಿ ಮಾಡಿದ್ದಾರೆ ", ಎಂದು ಬಿಒಪಿಇಇ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸುತ್ತಿರುವ ಅಹಮಿದ್ ಮಿರ್ ತಮ್ಮ ಬೋರ್ಡ್ ಕಡೆಯಿಂದಾದ ತಪ್ಪಿಗೆ ಸಮರ್ಥನೆ ನೀಡಿದ್ದಾರೆ.