ಹಕ್ಕಿಗಳ ಜತೆ ಆನೆಮರಿಯಾಟವನ್ನು ನೋಡಿದ್ದೀರಾ? ( ವೀಡಿಯೋ)

ಶನಿವಾರ, 1 ಆಗಸ್ಟ್ 2015 (13:01 IST)
ಪ್ರಾಣಿಲೋಕ, ಕಾಡು ಸದಾ ಹಲವಾರು ವಿಸ್ಮಯಗಳ ಗೂಡು. ಪ್ರಾಣಿ ಪ್ರಿಯರಿಗೆ ಅವುಗಳ ಆಟ ನೋಡುವುದಕ್ಕಿಂತ ಹೆಚ್ಚಿನ ಸಂತೋಷ ಬೇರಿಲ್ಲ. ಕಪಟವರಿಯದ ಪ್ರಾಣಿಗಳ, ಪುಟ್ಟ ಪುಟ್ಟ ಮರಿಗಳ ತುಂಟಾಟವನ್ನು ನೋಡಿ ಆನಂದಿಸದವರು ಯಾರು ಹೇಳಿ?


 
ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಉದ್ಯಾವನದಲ್ಲಿ ಕಂಡುಬಂದ ಈ ದೃಶ್ಯಾವಳಿಗಳು ಎಂತವರನ್ನು ಮತ್ತೊಮ್ಮೆ ನೋಡುವಂತೆ ಮಾಡಿಸುತ್ತದೆ. ಆನೆ ಮರಿಯೊಂದು ಹಕ್ಕಿಗಳ ಜೊತೆಗೆ ಆಟವಾಡುವ ವೀಡಿಯೋವದು. 
 
ದಕ್ಷಿಣ ಆಫ್ರಿಕಾದ ಕ್ರೋಗರ್ ನ್ಯಾಶನಲ್ ಪಾರ್ಕ್‍ನಲ್ಲಿ ಪುಟ್ಟ ಆನೆ ಮರಿಯೊಂದು ಪಕ್ಷಿಗಳ ಜೊತೆ ಆಟವಾಡುತ್ತಿದೆ. ಗಿಡಗಂಟಿಗಳಲ್ಲಿ ಹಾರಾಡುತ್ತಿದ್ದ ಹಕ್ಕಿಗಳ ಗುಂಪೊಂದು ರಸ್ತೆ ದಾಟುತ್ತಿದ್ದ ಆನೆ ಮರಿಯ ಗಮನ ಸೆಳೆದಿವೆ. ಪುಟ್ಟ ಪುಟ್ಟ ಹಕ್ಕಿಗಳ ಗುಂಪನ್ನು ಕಂಡ ಆನೆ ಮರಿಗೆ ತಾನು ಅಮ್ಮನ ಜತೆ ಕಾಡಿಗೆ ಹೋಗುತ್ತಿರುವುದು ಮರೆತು ಹೋಗಿದೆ. ರಸ್ತೆಯಲ್ಲಿ ವಾಹನಗಳು ಓಡಾಡುತ್ತಿರುವುದನ್ನು ಲೆಕ್ಕಿಸದೆ ಹಕ್ಕಿಗಳನ್ನು ಹಿಡಿಯಲು ಅದು ಓಡಾಡಿದೆ.
 
ಕೆಲ ಹೊತ್ತು ಹಕ್ಕಿಗಳನ್ನು ಹಿಡಿದೇ ತೀರುತ್ತೇನೆ ಎಂಬಂತೆ ಸೊಂಡಿಲನ್ನು ಅಲ್ಲಾಡಿಸುತ್ತಾ, ಬಾಲವನ್ನು ಮೇಲೆತ್ತಿ ಓಡಾಡಿದ ಆ ಮುದ್ದುಮರಿ ನಂತರ ತಾಯಿಯ ಜತೆಗೆ ಕಾಡಿನೊಳಕ್ಕೆ ಸಾಗಿದೆ. ಆ ಸಂದರ್ಭದಲ್ಲಿ ರಸ್ತೆಯ ಮೇಲೆ ಹೋಗುತ್ತಿದ್ದವರು ಇದನ್ನು ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ.
 
ಆನೆ ಮರಿಯ ತುಂಟಾಟದ ದೃಶ್ಯಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿವೆ. 

ನೀವು ಈ ವೀಡಿಯೋವನ್ನು ನೋಡಿ ಆನಂದಿಸಿ...

ವೆಬ್ದುನಿಯಾವನ್ನು ಓದಿ