ವಿವಾಹ ನೋಂದಣಿ ಮಾಡಿಸಲು ಏನೆಲ್ಲಾ ದಾಖಲೆಗಳು ಬೇಕಾಗುತ್ತವೆ ಇಲ್ಲಿದೆ ವಿವರ

Krishnaveni K

ಶುಕ್ರವಾರ, 30 ಆಗಸ್ಟ್ 2024 (12:12 IST)
ಬೆಂಗಳೂರು: ಮದುವೆಯಾದ ಬಳಿಕ ಜೋಡಿ ಜೀವಗಳು ಹನಿಮೂನ್ ಗೆ ಹೋಗುವುದು ಎಷ್ಟು ಮುಖ್ಯವೋ ಮದುವೆ ನೋಂದಣಿ ಮಾಡಿಸುವುದು ಅಷ್ಟೇ ಮುಖ್ಯ. ಇದಕ್ಕೆ ಏನೆಲ್ಲಾ ದಾಖಲೆಗಳು ಬೇಕಾಗುತ್ತವೆ ಇಲ್ಲಿ ನೋಡಿ.

ಮದುವೆಯಾದ ಬಳಿಕ ಎರಡು ತಿಂಗಳೊಳಗಾಗಿ ಮದುವೆ ನೋಂದಣಿ ಮಾಡಿಸಿಕೊಂಡು ಸರ್ಟಿಫಿಕೇಟ್ ಮಾಡಿಸಿಕೊಳ್ಳಬೇಕು. ಇದಕ್ಕಾಗಿ ಪತಿ ಅಥವಾ ಪತ್ನಿಯ ಸಮೀಪದ ಉಪ ನೋಂದಣಿ ಕಚೇರಿಗೆ ಹೋಗಬೇಕಾಗುತ್ತದೆ. ಅಥವಾ ಕರ್ನಾಟಕ ಸರ್ಕಾರದ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು. 1955 ರ ಹಿಂದೂ ವಿವಾಹ ನಿಯಮದ ಪ್ರಕಾರ ವಿವಾಹ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ವಿವಾಹ ನೋಂದಣಿಗೆ ಬೇಕಾದ ದಾಖಲೆಗಳು
ವಿವಾಹದ ಎರಡು ಫೋಟೋಗಳು
6 ಪಾಸ್ ಪೋರ್ಟ್ ಸೈಝ್ ಫೋಟೋಗಳು
ವಿವಾಹ ಆಮಂತ್ರಣ ಪತ್ರಿಕೆ
ಪಾಸ್ ಪೋರ್ಟ್, ವೋಟರ್ ಐಡಿ ಅಥವಾ ಯಾವುದೇ ಗುರುತಿನ ಚೀಟಿ
ಪತಿ-ಪತ್ನಿಯ ಎಸ್ಎಸ್ಎಲ್ ಸಿ ಮಾರ್ಕ್ ಕಾರ್ಡ್, ಜನನ ಪ್ರಮಾಣ ಪತ್ರ
ಆಧಾರ್ ಕಾರ್ಡ್
ಇಬ್ಬರು ಸಾಕ್ಷಿದಾರರು

ಉಪನೋಂದಣಿ ಕಚೇರಿಯಲ್ಲಿ ಕೊಡುವ ಫಾರ್ಮ್ ಭರ್ತಿ ಮಾಡಿ ಮೇಲೆ ಹೇಳಿದ ದಾಖಲೆಗಳನ್ನು ನೀಡಿ ಪತಿ-ಪತ್ನಿ ಇಬ್ಬರೂ ಸಹಿ ಮಾಡಿ ಅರ್ಜಿ ಸಲ್ಲಿಸಬೇಕು. ವಿವಾಹ ನೋಂದಣಿಯ ಎರಡು ಪ್ರತಿಗಳನ್ನು ನೀಡಲಾಗುತ್ತದೆ.  ಉಳಿದೊಂದು ಪ್ರತಿಯನ್ನು ಉಪನೋಂದಣಿ ಕಚೇರಿಯಲ್ಲಿ ದಾಖಲೆಗಾಗಿ ಇಡಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ