ವಂಚಕ ಪ್ರಿಯತಮನ ದುಬಾರಿ ಬೆಲೆಯ ಆ್ಯಪಲ್ ಪ್ರಾಡಕ್ಟ್‌ಗಳನ್ನು ನೀರಿನ ತೊಟ್ಟಿಯೊಳಗೆ ಎಸೆದ ಯುವತಿ

ಶುಕ್ರವಾರ, 24 ಏಪ್ರಿಲ್ 2015 (17:04 IST)
ತನಗೆ ಮೋಸ ಮಾಡಿದ ಪ್ರಿಯತಮನಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ ಜಪಾನ್ ಯುವತಿಯೊಬ್ಬಳು ಆತನ ದುಬಾರಿ ಬೆಲೆಯ ಆ್ಯಪಲ್ ಪ್ರಾಡಕ್ಟ್‌‌ಗಳನ್ನೆಲ್ಲ ನೀರು ತುಂಬಿದ್ದ ತೊಟ್ಟಿಯೊಳಗೆ ಎಸೆದಿದ್ದಾಳೆ. ಆತನಿಗೆ ಅತಿಯಾಗಿ ನೋವಾಗುವಂತೆ ಮಾಡಲು ಏನು ಮಾಡಬೇಕು ಎಂದು ಹಲವಾರು ಬಾರಿ ಯೋಚಿಸಿದ ಆಕೆ ಕೊನೆಗೆ ಈ ನಿರ್ಧಾರಕ್ಕೆ ಬಂದಿದ್ದಾಳೆ. 
 


ಆ್ಯಪಲ್ ಪ್ರಾಡಕ್ಟ್‌‌ಗಳನ್ನು ನೀರಿಗೆಸೆದ ಚಿತ್ರಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದ ಆಕೆ ಆತನಿಗೆ ಅವುಗಳನ್ನು ಕಳುಹಿಸಿದ್ದಾಳೆ.
 
ಆ್ಯಪಲ್ ಪ್ರಾಡಕ್ಟ್‌ಗಳನ್ನು ನೀರಿನಲ್ಲಿ ಹಾಕಿದ ಫೋಟೋಗಳುಳ್ಳ ಟ್ವೀಟ್ ಈಗ ವೈರಲ್ ಆಗಿ ಹರಿದಾಡುತ್ತಿದೆ. 
 
ರಾಕೆಟ್ ನಿವ್ಸ್24 ಎಂಬ ವೆಬ್ಸೈಟ್ ಪ್ರಕಾರ ಕೆಲವರು ತಾವು ಇಷ್ಟಪಡುವ ಆ್ಯಪಲ್ ಕಂಪನಿಯ ಉತ್ಪನ್ನಗಳನ್ನು ಹಾಳುಗೆಡವಿದ್ದಕ್ಕೆ ಸಹಜವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಕುತೂಹಲಕರವಾದ ವಿಷಯವೇನೆಂದರೆ ಆಕೆಯ ಕೃತ್ಯವನ್ನು ಬೆಂಬಲಿಸಿ ಕೂಡ  ಪ್ರತಿಕ್ರಿಯೆಗಳು ಬಂದಿವೆ. 

ವೆಬ್ದುನಿಯಾವನ್ನು ಓದಿ