ಮುಸ್ಲಿಮರಿಗೆ ಬಿಜೆಪಿ ಪಕ್ಷದ ಟಿಕೆಟ್ ಕೊಡೊಲ್ಲ: ಕೆ.ಎಸ್,ಈಶ್ವರಪ್ಪ
ಬುಧವಾರ, 3 ಏಪ್ರಿಲ್ 2019 (15:06 IST)
ಮುಸ್ಲಿಮರಿಗೆ ಬಿಜೆಪಿ ಪಕ್ಷದಲ್ಲಿ ನಂಬಿಕೆಯಿಲ್ಲವಾದ್ದರಿಂದ ಅವರಿಗೆ ಪಕ್ಷದ ಟಿಕೆಟ್ ಕೊಡುವುದಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಾವು ಕರ್ನಾಟಕದಲ್ಲಿ ಮುಸ್ಲಿಮರಿಗೆ ಯಾವತ್ತೂ ಟಿಕೆಟ್ ಕೊಡುವುದಿಲ್ಲ.ಯಾಕೆಂದರೆ ಅವರಿಗೆ ನಮ್ಮ ಪಕ್ಷದ ಮೇಲೆ ನಂಬಿಕೆಯಿಲ್ಲ. ಒಂದು ವೇಳೆ ನಂಬುವುದಾದರೇ ನಮಗೆ ಮತ ಹಾಕುವುದಾದರೇ ಅಥವಾ ನೀವು ನಮಗೆ ಅರ್ಥ ಮಾಡಿಕೊಳ್ಳುವುದಾದರೇ ಆವಾಗ ಪಕ್ಷದ ಟಿಕೆಟ್ ನೀಡುವ ಬಗ್ಗೆ ನೋಡೋಣ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮುಸ್ಲಿಂ ಸಮುದಾಯವನ್ನು ಓಟ್ ಬ್ಯಾಂಕ್‌ನಂತೆ ಬಳಸಿಕೊಂಡಿದೆ ಎಂದು ಆರೋಪಿಸಿದರು.
ಕುರುಬ ಸಮುದಾಯದ ಹಿರಿಯ ನಾಯಕರಾದ ಈಶ್ವರಪ್ಪ ಮಾತನಾಡಿ, ನಾನು ಮುಸ್ಲಿಮರು ಸೇರಿದಂತೆ ಯಾವುದೇ ಸಮುದಾಯದ ದ್ವೇಷಿಯಲ್ಲ ಎಂದು ಸ್ಪಷ್ಟಪಡಿಸಿದರು.