ನಿಖಿಲ್ ಮತಬೇಟೆ ಮುಂದುವರಿಸಿದ್ದು ಹೇಗೆ?

ಮಂಗಳವಾರ, 9 ಏಪ್ರಿಲ್ 2019 (19:35 IST)
ಚುನಾವಣೆಯಲ್ಲಿ ಮತಬೇಟೆಗೆ ಭರ್ಜರಿ ಪ್ರಚಾರವನ್ನು ಮೈತ್ರಿ ಪಕ್ಷದ ಅಭ್ಯರ್ಥಿ ನಡೆಸುತ್ತಿದ್ದಾರೆ.

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಯಿಂದ ಮತ ಬೇಟೆ ಮುಂದುವರಿದಿದೆ. ಮಳವಳ್ಳಿ ತಾಲೂಕಿನ ನಡಕಲಪುರದಲ್ಲಿ ಮತಾಯಾಚನೆ ಮಾಡಿದ್ದಾರೆ.

ನಡಕಲಪುರದ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ನಿಖಿಲ್ ಆ ಬಳಿಕ ಮತದಾರರನ್ನು ಉದ್ದೇಶಿಸಿ ಮಾತನಾಡಿದ್ರು.

ಪ್ರಚಾರದಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ರು.

ಜೆಡಿಎಸ್ ಮುಖಂಡ ಅನ್ನದಾನಿ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರವಿ ನಿಖಿಲ್ ಗೆ ಸಾಥ್ ನೀಡಿದ್ರು.

ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಜಯರಾಮು ಇದ್ದರು. ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಪ್ರಚಾರ ನಡೆಸಿದ್ರು. ಬೈಕ್ ಸವಾರರು ನಿಖಿಲ್ ರನ್ನು ಭರ್ಜರಿಯಾಗಿ ಸ್ವಾಗತ ಕೋರಿದ್ರು.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ