ಎಕ್ಸಿಟ್ ಪೋಲ್ ರಿಸಲ್ಟ್ ಬಳಿಕ ಎನ್ ಡಿಎ ಮಿತ್ರ ಪಕ್ಷಗಳಿಗೆ ಅಮಿತ್ ಶಾ ಭರ್ಜರಿ ಔತಣಕೂಟ

ಸೋಮವಾರ, 20 ಮೇ 2019 (13:40 IST)
ನವದೆಹಲಿ: ಎಕ್ಸಿಟ್ ಪೋಲ್ ಫಲಿತಾಂಶದ ಪ್ರಕಾರ ಈ ಬಾರಿ ಬಿಜೆಪಿ ಏಕಾಂಗಿಯಾಗಿ ಅಧಿಕಾರಕ್ಕೇರುವುದು ಕಷ್ಟ. ಆದರೆ ಎನ್ ಡಿಎ ಮೈತ್ರಿಕೂಟ ಮೇಲಾಗುತ್ತದೆ ಎಂಬ ವರದಿ ಬಂದಿದೆ.


ಎಕ್ಸಿಟ್ ಪೋಲ್ ವರದಿಗಳ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಮ್ಮ ಮಿತ್ರ ಪಕ್ಷದ ನಾಯಕರನ್ನು ಕರೆದು ಔತಣಕೂಟ ಏರ್ಪಡಿಸಿದ್ದಾರೆ.

ಈ ಮೂಲಕ ಮಿತ್ರಪಕ್ಷಗಳ ಜತೆ ಸರ್ಕಾರ ರಚಿಸುವ ಸಿದ್ಧತೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮಂಗಳವಾರ ಈ ಔತಣಕೂಟ ನಡೆಯಲಿದ್ದು, ಬಿಜೆಪಿ ಮಿತ್ರ ಪಕ್ಷಗಳಾದ ಶಿವಸೇನೆ, ಅಕಾಲಿ ದಳ, ಎಐಎಡಿಎಂಕೆ, ಜೆಡಿಯು, ಎಲ್ ಜೆಪಿ ಪಕ್ಷಗಳ ನಾಯಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅದಕ್ಕೂ ಮೊದಲು ಅಂದರೆ ನಾಳೆ ಬಿಜೆಪಿ ಕೇಂದ್ರ ಮಂತ್ರಿಮಂಡಲದ ಸಭೆ ಕರೆದಿದ್ದು, ಈ ಸಭೆಯ ಉದ್ದೇಶ ಬಹಿರಂಗವಾಗಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ