ತೇಜಸ್ವಿ ಸೂರ್ಯ ವಿರುದ್ಧ ದೂರು ದಾಖಲು

ಶುಕ್ರವಾರ, 12 ಏಪ್ರಿಲ್ 2019 (10:40 IST)
ಬೆಂಗಳೂರು : ಬಾಲಕೋಟ್ ವೈಮಾನಿಕ ದಾಳಿಯನ್ನು ಬಿಜೆಪಿಯ ಸಾಧನೆ ಎನ್ನುವ ರೀತಿಯಲ್ಲಿ ಬಿಂಬಿಸಿ ಮತ ಯಾಚನೆ ಮಾಡಿದ ಆರೋಪದ ಮೇಲೆ ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗಕ್ಕೆ  ದೂರು ನೀಡಲಾಗಿದೆ.


ತೇಜಸ್ವಿ ಸೂರ್ಯ ಅವರು ಭಾರತೀಯ ಸೇನೆಯು ಪುಲ್ವಾಮಾದಲ್ಲಿ ನಡೆದ ಘಟನೆಗೆ ಪ್ರತೀಕಾರವಾಗಿ ಪಾಕಿಸ್ತಾನದ ನೆಲದಲ್ಲಿ ನಡೆಸಿದ್ದ ವಾಯು ದಾಳಿಯನ್ನು ಉಲ್ಲೇಖಿಸಿ ಕರಪತ್ರ ಮುದ್ರಿಸಿ, ಹಂಚಿಕೆ ಮಾಡಿ ಮತಯಾಚನೆ ಮಾಡಿದ್ದರು.


ಈ ಹಿನ್ನಲೆಯಲ್ಲಿ ಸರ್ಜಿಕಲ್ ಸ್ಟ್ರೈಕ್ ಪ್ರಸ್ತಾಪಿಸಿ ಚುನಾವಣಾ ನೀತಿ ಸಂಹಿತಿಯನ್ನು ಉಲ್ಲಂಘಿಸಿದ್ದಾರೆ ಎಂದು ವಕೀಲರಾದ ಬಿ.ಸಂಜಯ್ ಯಾದವ್ ಹಾಗೂ ಮಹಮ್ಮದ್ ಅಯೂಬ್ ಅಲಿ ಎಂಬುವವರು ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗಕ್ಕೆ  ದೂರು ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ