ಶೋಭಾ ಕರಂದ್ಲಾಜೆಗೆ ಜನ ಈ ಬಾರಿ ಮತ ಹಾಕುವುದಿಲ್ಲ- ಪ್ರಮೋದ್​ ಮಧ್ವರಾಜ್ ವಿಶ್ವಾಸ

ಗುರುವಾರ, 18 ಏಪ್ರಿಲ್ 2019 (12:41 IST)
ಉಡುಪಿ : ಇಂದು ನಡೆಯುತ್ತಿರುವ ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್​ ಮಧ್ವರಾಜ್​ ಹಾಗೂ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ನಡುವೆ ಬಾರೀ ಪೈಪೋಟಿ ಏರ್ಪಟ್ಟಿದೆ.


ಇದೀಗ ಮೈತ್ರಿ ಅಭ್ಯರ್ಥಿ ಪ್ರಮೋದ್​ ಮಧ್ವರಾಜ್​ ಮತಚಲಾವಣೆ ಮಾಡಿದ್ದು, ನಂತರ ಮಾಧ್ಯಮದ ಜತೆ ಮಾತನಾಡಿ, ರಾತ್ರಿ ಕಂಡ ಬಾವಿಗೆ ಹಗಲು ಯಾರೂ ಬೀಳುವುದಿಲ್ಲ. ಅದರಂತೆಯೇ ಶೋಭಾ ಕರಂದ್ಲಾಜೆ ಅವರಿಗೆ ಜನ ಈ ಬಾರಿ ಮತ ಹಾಕುವುದಿಲ್ಲ ಎಂಬ ವಿಶ್ವಾಸವನ್ನು ಪ್ರಮೋದ್​ ಮಧ್ವರಾಜ್​ ವ್ಯಕ್ತಪಡಿಸಿದ್ದಾರೆ.


ನಾನು ಮೈತ್ರಿ ಅಭ್ಯರ್ಥಿ ಆದಾಗ ಅಪಸ್ವರವಿತ್ತು. ಈಗ ಕಾರ್ಯಕರ್ತರಿಗೆ ಒಳ್ಳೆಯ ನಿರ್ಧಾರ ಎಂಬ ಭಾವನೆ ಬಂದಿದೆ. ಕಾರ್ಯಕರ್ತರು ನಾಯಕರಿಗೆ ಮನವರಿಕೆ ಮಾಡಲಾಗಿದೆ. ಹಿಂದಿನ ಚುನಾವಣೆಗಿಂತಲೂ ಹೆಚ್ಚಿನ ಉತ್ಸಾಹದಲ್ಲಿ ಫೀಲ್ಡ್ ವರ್ಕ್ ಆಗಿದೆ. ಎಲ್ಲಾ ಪ್ರಚಾರದಲ್ಲೂ ಮುಂಚೂಣಿಯಲ್ಲಿದ್ದೇವೆ. ಮೋದಿ ಹೆಸರಿನಲ್ಲಿ ಕೆಟ್ಟ ಜನಪ್ರತಿನಿಧಿ ಆಯ್ಕೆ ಮಾಡುವುದರಿಂದ ಅವರಿಗೇ ನಷ್ಟ ಎಂದು ಜನರಿಗೆ ಮನವರಿಕೆಯಾಗಿದೆ," ಎಂದು ಮಧ್ವರಾಜ್​ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ