ಪಾರ್ಸಲ್ ನೀಡಲು ಬಂದ ಡೆಲಿವರಿ ಬಾಯ್ ಯಿಂದ ಯುವತಿಗೆ ಲೈಂಗಿಕ ಕಿರುಕುಳ

ಮಂಗಳವಾರ, 2 ಏಪ್ರಿಲ್ 2019 (14:47 IST)
ಬೆಂಗಳೂರು : ಊಟ ಆರ್ಡರ್ ಮಾಡಿದ್ದ ಯುವತಿಗೆ ಪಾರ್ಸಲ್ ನೀಡಲು ಬಂದ ಡೆಲಿವರಿ ಬಾಯ್ ಯೊಬ್ಬ ಆಕೆಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ತಿಳಿದುಬಂದಿದೆ.


ಯುವತಿಯೊಬ್ಬಳು ಸ್ವಿಗಿ ಆಪ್‍ ಮೂಲಕ ಊಟ ಆರ್ಡರ್ ಮಾಡಿದ್ದಾರೆ. ಊಟ ತೆಗೆದುಕೊಂಡು ಯುವತಿ ಮನೆಗೆ ಬಂದ ಡೆಲಿವರಿ ಬಾಯ್ ಬಾಗಿಲು ತೆರೆದ ಯುವತಿಗೆ ತನ್ನೊಂದಿಗೆ ಸೆಕ್ಸ್ ಮಾಡುವಂತೆ ಬೇಡಿಕೆ ಇಟ್ಟಿದ್ದಾನೆ.


ಈ ಘಟನೆಗೆ ಸಂಬಂಧಿಸಿದಂತೆ ಡೆಲಿವರಿ ಹುಡುಗನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಯುವತಿ ಸ್ವಿಗ್ಗಿ ಸಂಸ್ಥೆಗೆ ದೂರು ನೀಡಿದ್ದಾಳೆ. ಯುವತಿಯ ದೂರಿಗೆ ಪ್ರತಿಕ್ರಿಯಿಸಿದ ಕಂಪನಿ, ನಾವು ಡೆಲಿವರಿ ಹುಡಗನ ಬಗ್ಗೆ ವಿಚಾರಣೆ ಮಾಡುತ್ತೇವೆ ಎಂದು ತಿಳಿಸಿದೆ. ಜೊತೆಗೆ ಯುವತಿಯ ಬಳಿ ಕ್ಷಮೆಯಾಚಿಸುವ ಮೂಲಕ 200 ರೂಪಾಯಿ ಕೂಪನ್ ಕಾರ್ಡ್ ಕಳುಹಿಸಿದೆ. ಈ ಬಗ್ಗೆ ಬಗ್ಗೆ ಯುವತಿ ತನ್ನ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ತಿಳಿಸಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ