ಐತಿಹಾಸಿಕವಾದ ಮಹಾಬಲೇಶ್ವರದಲ್ಲಿ ಭಾನುವಾರ (ಜ.9) ಖ್ಯಾತ ಮಹಾಮೃತ್ಯುಂಜಯ ರಥ ಯಾತ್ರೆ ನಡೆಯಲಿದೆ. ಇದು ಇಲ್ಲಿ ನಡೆಯುತ್ತಿರುವ ರಥಯಾತ್ರೆ ಮಹೋತ್ಸವದ ಯಶಸ್ವೀ ಐದನೇ ವರ್ಷವಾಗಿದೆ.
ರಥ ಯಾತ್ರೆಯು ಸ್ವಾಧ್ಯಾಯ ಭವನ (ಮಹಾಲಕ್ಷ್ಮೀ ನಗರ ಕಾಲನಿ)ದಿಂದ ಮಧ್ಯಾಹ್ನ 12.30ಕ್ಕೆ ಆರಂಭವಾಗಲಿದ್ದು, ಪವಿತ್ರ ನರ್ಮದಾ ನದಿ ತಟದಲ್ಲಿ ಸಾಯಂಕಾಲ 5.30ರ ವೇಳೆಗೆ ಕೊನೆಗೊಳ್ಳಲಿದೆ. ಪ್ರತಿವರ್ಷ ನಡೆಯುವ ಈ ಅವಿಸ್ಮರಣೀಯ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.
ಹೋಳ್ಕರ್ ಸಾಮ್ರಾಜ್ಯದ ರಾಜಧಾನಿಯಾಗಿತ್ತು ಮಾಹೇಶ್ವರ ನಗರಿ. ಇದನ್ನು ಪ್ರಖ್ಯಾತ ರಾಣಿ ದೇವಿ ಅಹಿಲ್ಯಾ ಹೋಳ್ಕರ್ ಹಲವಾರು ವರ್ಷಗಳ ಕಾಲ ಆಳಿದ್ದರು.