ಆತ್ಮಹತ್ಯೆಗೆ ಶರಣಾದ ಹಾಲಿವುಡ್ ನಿರ್ಮಾಪಕ ಮೂರ್

ನ್ಯೂಯಾರ್ಕ್: ಸೂಪರ್‌ಹಿಟ್ ಕಾಲ್ಪನಿಕ ಚಿತ್ರ 'ದಿ ಕ್ರಾನಿಕಲ್ಸ್ ಆಫ್ ನಾರ್ನಿಯಾ' ದ ನಿರ್ಮಾಪಕ ಪೆರ್ರಿ ಮೂರ್ ಆತ್ಮಹತ್ಯೆಗೆ ಶರಣಾಗಿದ್ದು, ಇಡೀ ಹಾಲಿವುಡ್‌ ಜಗತ್ತನೇ ಬೆರಗುಗೊಳಿಸಿದ್ದಾರೆ.

39 ಹರೆಯದ ಮೂರ್ ತನ್ನ 'ಗ್ರೀನ್ ವಿಚ್ ವಿಲೇಜ್ ಅಪಾರ್ಟ್‌ಮೆಂಟ್'ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕ ಪೈನ್ ಕಿಲ್ಲರ್‌ಗಳನ್ನು ಸೇವಿಸಿದ ಪರಿಣಾಮ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿದ್ದು, ಆದರೆ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸ್ ವಲಯ ತಿಳಿಸಿದೆ.

ಅಮೆರಿಕಾ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅಧಿಕಾರವಧಿಯಲ್ಲಿ ಆಂತರಿಕ ಆಡಳಿತದಲ್ಲಿ ಕಾರ್ಯನಿರ್ವಹಿಸಿದ್ದ ಮೂರ್, ಯುವ ಸಲಿಂಗಕಾಮಿಯೊಬ್ಬನ ಬಗ್ಗೆ 'ಹೀರೊ' ಎಂಬ ಜನಪ್ರಿಯ ಕಾದಂಬರಿ ಬರೆದಿದ್ದರು.

ಕಾಡಿನ ರಾಜ ಸಿಂಹ ಆ ಊರಿನ ಚಿನ್ನರ ಬಳಗದ ಸಾಹಸ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಪ್ರೇರೆಪಿಸುವ ಕಥಾ ಹಂದರವನ್ನು ಹೊಂದಿದ್ದ 'ದಿ ಕ್ರಾನಿಕಲ್ ಆಫ್ ನಾರ್ನಿಯಾ' ಚಿತ್ರ ಸರಪಣಿ ಮೂರು ಭಾಗಗಳಲ್ಲಿ ಮೂಡಿಬಂದಿತ್ತು. ಎಲ್ಲಾ ರೀತಿಯ ಪ್ರೇಕ್ಷಕರನ್ನು ರಂಜಿಸಿದ್ದ ಈ ಜನಪ್ರಿಯ ಚಿತ್ರ 1.5 ಶತಕೋಟಿ ಬಾಚಿಕೊಂಡಿತ್ತು.

ವೆಬ್ದುನಿಯಾವನ್ನು ಓದಿ