ಒಬಾಮಗೆ 'ಅಡುಗೆ ಭಟ್ಟ'ರಾಗಲು ಸ್ನೂಪ್ ಸಲಹೆ

ND
ಅಮೆರಿಕಾದ ನೂತನ ಅಧ್ಯಕ್ಷ ಬರಾಕ್ ಒಬಾಮರಿಗೆ ಪರಿವಾರದಲ್ಲಿ ಸಂತೋಷ ಹೆಚ್ಚಿಸುವುದಕ್ಕಾಗಿ ರಾಪ್ ಸ್ಟಾರ್ ಸ್ನೂಪ್ ಡಾಜ್ ಉತ್ತಮ ಸಲಹೆಯೊಂದನ್ನು ಇತ್ತಿದ್ದಾರೆ- ಬೇಕಿಂಗ್ ಕಲಿಯಿರಿ ಎಂಬುದು ಆ ಸಲಹೆ!

ಒಬಾಮ ಉತ್ತಮ ಅಡುಗೆ ಭಟ್ಟರಾಗುವುದರಿಂದ ತಮ್ಮ ಮಕ್ಕಳಾದ ಸಾಸ್‌ಹ ಮತ್ತು ಮಾಲಿಯಾ ಅವರ ಒಲವು ಹೆಚ್ಚಿಸಿಕೊಳ್ಳಬಹುದೆಂಬುದು ಸ್ನೂಪ್ ಅಭಿಪ್ರಾಯ.

"ಮಿಸ್ಟರ್. ಪ್ರೆಸಿಡೆಂಟ್ ಕೇಕ್ ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕು. ನನಗೆ ಕೇಕ್ಸ್, ಪಾಪ್‌ಕಾರ್ನ್, ಕಾಟನ್ ಕ್ಯಾಂಡಿ... ಮುಂತಾದವುಗಳನ್ನು ತಯಾರಿಸುವುದು ಹೇಗೆಂದು ತಿಳಿದಿದೆ" ಎಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ