ದಾತಕ್‌ಶಿಪ್ ಮಿಸ್ ಮಾಡಿಕೊಳ್ಳಲಿರುವ ಶಾರುಖ್

ಭಾರತದ ಸೂಪರ್ ಸ್ಟಾರ್ ಶಾರುಖ್ ಖಾನ್ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ನವೆಂಬರ್ 29ರಂದು ದಾತಕ್‌ಶಿಪ್ ಪ್ರಶಸ್ತಿಯನ್ನು ಸ್ವೀಕರಿಸಲು ಮಲೇಷ್ಯಾಗೆ ತೆರಳುವುದು ಅನುಮಾನಸ್ಪದವಾಗಿದೆ.

ಮೂಲಗಳ ಪ್ರಕಾರ, ರಾಜ್ಯದ ಅಧಿಕಾರಿಗಳು ಪ್ರತಿಷ್ಠಿತ ಪ್ರಶಸ್ತಿಯನ್ನು ಶಾರುಖ್ ಸ್ವೀಕರಿಸುವುದಕ್ಕೆ ಅನುಕೂಲವಾಗುವಂತೆ ಬದಲಿ ದಿನಾಂಕವನ್ನು ಗೊತ್ತು ಪಡಿಸುವ ಪ್ರಯತ್ನದಲ್ಲಿದ್ದಾರಂತೆ.

ಈ ಬಗ್ಗೆ ತಮಗೆ ವಿಷಯ ತಿಳಿದಿದೆ ಎಂದ ಮುಖ್ಯಮಂತ್ರಿ ಮೊಹಮ್ಮದ್ ಆಲಿ ರುಸ್ತಂ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. "ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂಬುದಷ್ಟೇ ನನಗೆ ತಿಳಿದಿದೆ, ಹೆಚ್ಚಿನ ಮಾಹಿತಿಗಾಗಿ ರಾಜ್ಯ ಕಾರ್ಯದರ್ಶಿಯವರನ್ನು ಸಂಪರ್ಕಿಸಬೇಕಾಗುತ್ತದೆ" ಎಂದು ಅವರು ಹೇಳಿದ್ದಾರೆ.

ದಾತಕ್ ಪ್ರಶಸ್ತಿಗೆ ಆಯ್ಕೆಯಾದ 77 ಜನರಲ್ಲಿ ಶಾರುಖ್ ಸಹ ಒಬ್ಬರು. ರಾಜ್ಯದ ಸುಲ್ತಾನ್ ತುನ್ ಮೊಹಮ್ಮದ್ ಖಾಲಿಲ್ ಯಾಕೂಬ್ ಅವರ 70ನೇ ಜನ್ಮದಿನದ ನೆನಪಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಶಾರುಖ್ ಖಾನ್‌ರ ಒನ್ ಟೂ ಕಾ ಫೋರ್ ಮತ್ತು ಇತರ ಕೆಲವು ಚಿತ್ರಗಳ ಚಿತ್ರೀಕರಣವನ್ನು ಮಲೆಕ್ಕಾದಲ್ಲಿ ನಡೆಸಲಾಗಿದೆ, ಇದರಿಂದ ರಾಜ್ಯಕ್ಕೆ ಖ್ಯಾತಿ ಬಂದಿದ್ದು, ಪ್ರವಾಸೋದ್ಯಮಕ್ಕೆ ಕೊಡುಗೆ ನೀಡಿದೆ ಎಂದು ಆಧಿಕಾರಿಗಳು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ