ಪಾಪ್ ಗಾಯಕಿ ರಿಹಾನಾ ಗುಪ್ತ ಸಂಸಾರ ಬಹಿರಂಗ!

ಅಪ್ಪಟ ಮಾದಕ ಗಾಯಕಿ ಎಂದೇ ಖ್ಯಾತಿ ಪಡೆದಿರುವ ರಿಹಾನಾ ಅವರ ಬರ್ಬಡೋಸ್ ಪ್ರದೇಶದಲ್ಲಿರುವ ಗುಪ್ತ ಸಂಸಾರ ಈಗ ಬಹಿರಂಗಗೊಂಡಿದೆ. ಚಿಕ್ಕ ಮತ್ತು ಚೊಕ್ಕ ಸಂಸಾರ ಎಂಬಂತಿದ್ದ ರಿಹಾನಾ ಅವರ ಸಂಸಾರ ಪುರಾಣವನ್ನು ಇದೀಗ ದಿ ಸನ್ ಪತ್ರಿಕೆ ಬಹಿರಂಗಗೊಳಿಸಿದೆ.

ಸದಾ ಒಂದಲ್ಲಾ ಒಂದು ರೀತಿಯಲ್ಲಿ ಸುದ್ಧಿಯಾಗುತ್ತಲೇ ಇದ್ದ ರಿಹಾನಾ ಅವರು ಪೂರ್ತಿ ಮೈಮುಚ್ಚಿದರೆ ಅದೂ ಸುದ್ದಿಯಾದೀತು. ಆದರೆ ಈ ಅದ್ಭುತ ಪಾಪ್ ಗಾಯಕಿ ಈಗ ಸುದ್ಧಿಯಾಗಿರುವುದು ತನ್ನ ತಂದೆ ರೊನಾಲ್ಡ್ ಫೆಂಟಿ ಅವರ ಗುಪ್ತ ಸಂಬಂಧಕ್ಕೆ ಸಂಬಂಧಿಸಿದ್ದು.

ಈ ಹಿಂದೆ ಎಲ್ಲರಿಗೂ ತಿಳಿದಿರುವಂತೆ ರಿಹಾನಾ ಅವರಿಗೆ ಇಬ್ಬರು ತಮ್ಮಂದಿರು. ಅಮ್ಮ ಮೊನಿಕಾ ಮತ್ತು ಅಪ್ಪ ರೊನಾಲ್ಡ್ ಫೆಂಟಿ. ಆದರೆ ಈಗ ಬಹಿರಂಗಗೊಂಡಿರುವ ವಿಚಾರದಂತೆ ರಿಹಾನಾ ಅವರ ತಂದೆ ರೊನಾಲ್ಡ್ ಫೆಂಟಿ ಅವರಿಗೆ ಈ ಮೂವರು ಮಕ್ಕಳಲ್ಲದೆ ಇನ್ನೂ ಮೂವರು ಮಕ್ಕಳಿದ್ದಾರಂತೆ. ವಿಶೇಷವೆಂದರೆ ಈ ಮೂವರು ಮಕ್ಕಳಿಗೂ ಒಂದೊಂದು ತಾಯಿ.

ಇನ್ನೂ ವಿಚಿತ್ರ ಎಂದರೆ ಈ ಸಹೋದರ ಸಹೋದರಿಯರನ್ನು ರಿಹಾನಾ ಗುಪ್ತವಾಗಿ ಭೇಟಿ ಮಾಡುತ್ತಿದ್ದದ್ದು. ಬಗ್ಗಿದರೂ ಮಾದ್ಯಮದ ಕಣ್ಣು ಹಾಗೇ ಸೆರೆಹಿಡಿಯುವುದನ್ನು ತಪ್ಪಿಸಿ ಅವರನ್ನೆಲ್ಲ ಭೇಟಿಮಾಡಲು ಅದೆಂತಾ ಚಾಣಾಕ್ಷ ಬುದ್ದಿವಂತಿಕೆ ಉಪಯೋಗಿಸಿರಬೇಕು ಈ ಪಾಪ್ ತಾರೆ ಎಂಬುದು ಇನ್ನೂ ಕುತೂಹಲದ ಸಂಗತಿ.

2009ರಲ್ಲಿ ತನ್ನ ಪ್ರಿಯತಮ ಕ್ರಿಸ್ ಬ್ರೌನ್ ಜತೆ ಸಂಬಂಧ ಕಳಚಿ ಬಿದ್ದಾಗ ರಿಹಾನಾ ಒಮ್ಮೆಲೆ ತನ್ನ ದೂರವಾಣಿ ಸಂಪರ್ಕವನ್ನೆಲ್ಲ ಕಡಿತಗೊಳಿಸಿದರು. ಈ ಕಾರಣದಿಂದ ತನ್ನ ಗುಪ್ತ ಕುಟುಂಬದೊಂದಿಗೆ ಸಂಬಂಧವೂ ಕಳಚಿ ಬಿತ್ತು. ಆ ನಂತರ ರಿಹಾನಾ ಭೇಟಿ ಮಾಡಲೇ ಇಲ್ಲ.

ಈ ವಿಚಾರವನ್ನೆಲ್ಲ ಛಾಯಾಚಿತ್ರದೊಂದಿಗೆ ಮಾದ್ಯಮಕ್ಕೆ ತಿಳಿಸಿದ್ದು ರಿಹಾನಾ ಅವರ ಗುಪ್ತ ಅಕ್ಕ ಮೂವತ್ತೆರಡು ವರ್ಷದ ಕ್ಯಾಂಡಿ. ಯಾವುದೇ ದುರುದ್ದೇಶ ಪೂರಿತವಾಗಿ ಅವರು ಈ ವಿಚಾರನ್ನು ಬಹಿರಂಗಗೊಳಿಸಿಲ್ಲ ಎಂಬುದು ಅವರ ಸಂಸ್ಕೃತಿ ಸಂಪ್ರದಾಯಕ್ಕೆ ಬಿಟ್ಟ ವಿಚಾರ ಎಂಬುದು ಇಲ್ಲಿ ಗಮನಾರ್ಹ.

ವೆಬ್ದುನಿಯಾವನ್ನು ಓದಿ