ಹಾಲಿವುಡ್ನ 20ನೇ ಶತಮಾನದ ಮಾದಕ ನಟಿ ಮರ್ಲಿನ್ ಮನ್ರೋ ಅವರ ಪ್ರಸಿದ್ಧ ಬಿಳಿ ವಸ್ತ್ರ 4.5 ದಶಲಕ್ಷ ಡಾಲರ್ಗೆ ಹರಾಜಾಗಿದೆ. 1970ರಿಂದ ಖ್ಯಾತನಾಮರ ಅಪರೂಪದ ವಸ್ತುಗಳನ್ನು ಸಂಗ್ರಹಿಸಿರುವ 79 ವರ್ಷದ ಮಾದಕ ನಟಿ ಡೆಬ್ಬಿ ರೆನಾಲ್ಡ್ಸ್ ಅವರು ಈ ಹರಾಜು ಪ್ರಕ್ರಿಯೆ ನಡೆಸಿದ್ದರು.
ಇಷ್ಟೆಲ್ಲಾ ಹಣ ಕೊಟ್ಟು ಖರೀದಿಸುವ ಔಚಿತ್ಯವೇನಿತ್ತು ಎಂಬ ಪ್ರಶ್ನೆಗೆ ಉತ್ತರ ಸಿಂಪಲ್. ಲಂಗ ಮತ್ತು ಬ್ಲೌಸನ್ನು ಒಟ್ಟಿಗೆ ಹೊಂದಿರುವಂತಿದ್ದ ಈ ವಸ್ತ್ರದಲ್ಲಿ, ಲಂಗದ ಭಾಗ ತೆಲುವಾಗಿ ಗಾಳಿಗೆ ಹಾರಾಡುವಂತಿದ್ದರೆ, ಮೇಲ್ಬಾಗವನ್ನು ಟವಲನ್ನು ಕತ್ತಿನ ಹಿಂದಿನಿಂದ ಸರಿಸಿ ಮುಚ್ಚಿಕೊಳ್ಳುವಂತೆ ಇತ್ತು. 1955 ರಲ್ಲಿ ತೆರೆ ಕಂಡಿದ್ದ 'ದಿ ಸೆವೆನ್ ಇಯರ್ ಇಛ್' ಚಿತ್ರದಲ್ಲಿ ಮನ್ರೋ ಈ ಮಾದಕ ವಸ್ತ್ರವನ್ನು ಧರಿಸಿದ್ದರು.
'ದಿ ಸೆವೆನ್ ಇಯರ್ ಇಛ್' ಚಿತ್ರದ ಸನ್ನಿವೇಶವೊಂದರಲ್ಲಿ ತಣ್ಣನೆ ಬೀಸುವ ಗಾಳಿ ಕೂಡ ಮನ್ರೋ ಅವರ ಲಂಗವನ್ನು ಹಾಗೆಯೇ ಮೇಲಕ್ಕೆ ಹಾರಿಸಿತ್ತು. ಅದೃಷ್ಟವಶಾತ್ ಹೆಚ್ಚಿಗೆ ಹಾರದಂತೆ ಹಿಡಿಯಲು ಯತ್ನಿಸಿದ್ದರೂ ಮನ್ರೋ ಧರಿಸಿದ್ದ ಒಳ ಉಡುಪು ಗೋಚರವಾಗಿತ್ತು. ಚಿತ್ರದ ಸನ್ನಿವೇಶಕ್ಕೆ ಹೀಗೆಲ್ಲಾ ಆಗಲೇಬೇಕೆಂದೇ ಪ್ರಸಿದ್ದ ವಸ್ತ್ರವಿನ್ಯಾಸಕ ವಿಲಿಯಂ ಟ್ರಾವಿಲ್ಲಾ ರೂಪಿಸಿದ್ದರು. ಇದು ಈ ಉಡುಪಿನ ಮತ್ತೊಂದು ವಿಶೇಷತೆ.
ಇದು ಅಪಾರ ಸಂಖ್ಯೆಯ ಚಿತ್ರರಸಿಕರ ಕಣ್ಮನ ಸೆಳೆಯುವುದರೊಂದಿಗೆ ಆ ಕಾಲಕ್ಕೆ ಯುವಜನರಲ್ಲಿ ಫ್ಯಾಶನ್ ಟ್ರೆಂಡ್ ಕೂಡ ಆಗಿತ್ತು. ಹಿರಿಯ ಛಾಯಾಗ್ರಾಹಕರ ಕಣ್ಣಲ್ಲಿ ಇಂದಿಗೂ ಮರ್ಲಿನ್ ಮನ್ರೋ ಅವರ ಈ ಚಿತ್ರ ಅತ್ಯದ್ಬುತ ಎನಿಸಿಕೊಂಡಿದೆ. ಆದರೂ ಸ್ವಲ್ಪ ದುಬಾರಿಯಾಯಿತೇನೊ, ಅಲ್ವಾ...?