ಮೂಕಪ್ರೇಮದ 'ದಿ ಆರ್ಟಿಸ್ಟ್' ಚಿತ್ರದ ಮಡಿಲಿಗೆ ಐದು ಆಸ್ಕರ್ ಪ್ರಶಸ್ತಿ
ಮಂಗಳವಾರ, 28 ಫೆಬ್ರವರಿ 2012 (11:38 IST)
WD
ಮೂಕಪ್ರೇಮದ 'ದಿ ಆರ್ಟಿಸ್ಟ್' ಚಲನಚಿತ್ರವು ಭಾನುವಾರ ರಾತ್ರಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಸೇರಿದಂತೆ ಐದು ಆಸ್ಕರ್ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದು, ಮಾರ್ಟಿನ್ ಸ್ಕೋರ್ಸೆಸೆ ಅವರ ಹ್ಯೂಗೋ ಚಲನಚಿತ್ರ ಕೂಡ ಐದು ಪ್ರಶಸ್ತಿಯನ್ನು ಬಾಚಿಕೊಂಡಿದೆ.
11 ಆಸ್ಕರ್ ಪ್ರಶಸ್ತಿಗಳಿಗಾಗಿ ನಾಮಕರಣ ಹೊಂದಿದ್ದ ಮಾರ್ಟಿನ್ ಸ್ಯಾರ್ಸೀಸ್ ನಿರ್ದೇಶನದ ಹ್ಯೂಗೋ 5 ಪ್ರಶಸ್ತಿಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಛಾಯಾಗ್ರಹಣ, ಕಲಾ ನಿರ್ದೇಶನ, ಧ್ವನಿ ಸಂಕಲನ, ಧ್ವನಿ ಮಿಶ್ರಣ ಮತ್ತು ದೃಶ್ಯ ಪರಿಣಾಮದ ಆಸ್ಕರ್ ಪ್ರಶಸ್ತಿಗಳು ಹ್ಯೂಗೋ ಪಾಲಾಗಿವೆ.
ಮೂಕಪ್ರೇಮದ ದಿ ಆರ್ಟಿಸ್ಟ್ 10 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮಕರಣ ಹೊಂದಿದ್ದು, ಅದು ಕೂಡ ಐದು (ವಸ್ತ್ರ ವಿನ್ಯಾಸ ಮತ್ತು ಸಂಗೀತ) ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ಚಲನಚಿತ್ರ ಮಂದಿರಗಳಿಂದ ಮೂಕಿ ಚಿತ್ರಗಳು ಕಣ್ಮರೆಯಾಗುತ್ತಿರುವ ಹೊತ್ತಿನಲ್ಲಿ ದಿ ಆರ್ಟಿಸ್ಟ್ ಕಪ್ಪು-ಬಿಳುಪಿನ ಚಿತ್ರವು ಐದು ಆಸ್ಕರ್ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ತನ್ನ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದೆ.
ಚಿತ್ರದ ಫ್ರೆಂಚ್ ನಟ ಜೀನ್ ಡುರ್ಜಾಡಿನ್ ಅವರ ನಟನೆ, ನಿರ್ದೇಶಕ ಮೈಕೆಲ್ ಹಝಾನ್ವಿಸಿಯಸ್ ಅವರ ನಿರ್ದೇಶನ ಹಾಗೂ ಸಂಗೀತ ಮತ್ತು ವಸ್ತ್ರ ವಿನ್ಯಾಸ ಈ ಚಿತ್ರಕ್ಕೆ ವಿಶ್ವದ ಅತ್ಯುನ್ನತ ಪ್ರಶಸ್ತಿಯನ್ನು ತಂದುಕೊಟ್ಟಿದೆ.
ಐರನ್ ಲೇಡಿ ಚಿತ್ರದ ಪ್ರಸಾದನಕ್ಕೆ ಆಸ್ಕರ್ ಪ್ರಶಸ್ತಿ ದೊರೆತಿದ್ದು, ಮೆರಿಲ್ ಸ್ವೀಪ್ ಈ ಚಿತ್ರದ ನಾಯಕಿ. ಆಕೆ ಬ್ರಿಟನ್ನ ಮಾಜಿ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಮೇಕಪ್ಗಾಗಿ ಈ ಪ್ರಶಸ್ತಿ ಸಂದಿದೆ ಎಂದು ವರದಿ ತಿಳಿಸಿದೆ.