2011 ಮೇ ತಿಂಗಳಲ್ಲಿ ಸ್ಪೈಡರ್‌ಮ್ಯಾನ್ 4

ಸೋಮವಾರ, 25 ಮೇ 2009 (15:21 IST)
ಸ್ಪೈಡರ್‌ಮ್ಯಾನ್ ಚಿತ್ರ ಸರಪಣಿಯ ನಾಲ್ಕನೇ ಭಾಗ 'ಸ್ಪೈಡರ್‌ಮ್ಯಾನ್ 4' 2011ರ ಮೇ ತಿಂಗಳಿನಲ್ಲಿ ಪ್ರದರ್ಶನ ಕಾಣಲಿದೆ. ಸಿನೆಮಾ ನಿರ್ಮಾಣ ಹಂತವನ್ನು ಆರಂಭಿಸಿದ್ದು, 2011ರ ವೇಳೆಗೆ ಪೂರ್ಣಗೊಳ್ಳಲಿದೆಯೆಂದು ತಿಳಿದು ಬಂದಿದೆ. 'ಸ್ಪೈಡರ್‌ಮ್ಯಾನ್ 4' ಚಿತ್ರ ಇತರ ಸ್ಪೈಡರ್‌ಮಾನ್ ಚಿತ್ರಗಳಿಗೆ ಹೋಲಿಸಿದರೆ ತೀರಾ ವಿಭಿನ್ನವಾಗಿರಲಿದೆ ಎಂದು ಚಿತ್ರ ನಿರ್ದೇಶಕ ಸ್ಯಾಮ್ ರೈಮಿ ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ