ಎಕ್ಸ್ ಮೆನ್ ಹೀರೋಗೆ ಚರ್ಮ ಕ್ಯಾನ್ಸರ್

ಶನಿವಾರ, 18 ಫೆಬ್ರವರಿ 2017 (12:51 IST)
ಸೂಪರ್ ಸ್ಟಾರ್ ಒಬ್ಬರು ಚರ್ಮ ಕ್ಯಾನ್ಸರ್‌ನಿಂದ ನರಳುತ್ತಿದ್ದಾರೆ. ಸದ್ಯಕ್ಕೆ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಆ ಸೂಪರ್ ಸ್ಟಾರ್ ಬೇರಾರು ಅಲ್ಲ...ಹಾಲಿವುಡ್ ಎಕ್ಸ್‌ ಮೆನ್ ಸಿನಿಮಾ ಗೊತ್ತಲ್ಲವೇ? ಆ ಸಿನಿಮಾ ಹೀರೋ ಹಗ್ ಜಾಕ್ ಮೇನ್. ಆತ ಚರ್ಮ ಕ್ಯಾನ್ಸರ್‌ನಿಂದ ನರಳುತ್ತಿದ್ದಾನೆ.
 
ಈ ವಿಷಯವನ್ನು ಸ್ವತಃ ಅವರೇ ಇನ್‌ಸ್ಟಾಗ್ರಾಮ್ ಮೂಲಕ ತಿಳಿಸಿದ್ದಾರೆ. ದೈವಸ್ವರೂಪ ವೈದ್ಯರು ಆ ಕ್ಯಾನ್ಸರ್ ಕಣಗಳನ್ನು ತೆಗೆದಿದ್ದಾರೆಂದು ಅವರು ಬರೆದುಕೊಂಡಿದ್ದಾರೆ. ಬೇಸಲ್ ಸೆಲ್ ಕಾರ್ಲಿನೋಮಾ (ಬಿಸಿಸಿ)ಯಿಂದ ನರಳುತ್ತಿರುವುದಾಗಿ ಅವರು ಇನ್‌ಸ್ಟಾಗ್ರಾಮದಲ್ಲಿ ತಿಳಿಸಿದ್ದಾರೆ.
 
ಅಮೆರಿಕಾದಲ್ಲಿ ಪ್ರತಿವರ್ಷ 30 ಲಕ್ಷ ಚರ್ಮ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿವೆ ಎಂದು ಸ್ಕಿನ್ ಕ್ಯಾನ್ಸರ್ ಫೌಂಡೇಷನ್ ತಿಳಿಸಿದೆ. 2013ರಲ್ಲಿ ಕ್ಯಾನ್ಸರ್ ಇರುವುದಾಗಿ ಗುರುತಿಸಿದರೆಂದು ಹಗ್ ಜಾಕ್ ಮೇನ್ ಹೇಳಿದ್ದಾರೆ. ತನ್ನ ಮೂಗಿನ ಮೇಲಿನ ಒಂದು ಮಚ್ಚೆಯನ್ನು ಗುರುತಿಸಿ ಪತ್ನಿ ಸಲಹೆ ಮೇರೆಗೆ ವೈದ್ಯರನ್ನು ಸಂಪರ್ಕಿಸಿದಾಗ ಚರ್ಮ ಕ್ಯಾನ್ಸರ್ ಇರುವುದಾಗಿ ತಿಳಿಯಿತು. ಮೂರು ತಿಂಗಳಿಗೊಮ್ಮೆ ಚಿಕಿತ್ಸೆ ಪಡೆಯುತ್ತಿದ್ದೇನೆಂದು. ತನ್ನ ಜೀವನದಲ್ಲಿ ಇದೊಂದು ಸರ್ವಸಾಧಾರಣ ವಿಷಯವಾಗಿದೆಯೆಂದು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ