ಜೇಮ್ಸ್ ಬಾಂಡ್ ಆಗಿ ಮತ್ತೆ ಡೇನಿಯಲ್ ಕ್ರೆಗ್?

ಮಂಗಳವಾರ, 13 ಡಿಸೆಂಬರ್ 2016 (12:01 IST)
ಜೇಮ್ಸ್ ಬಾಂಡ್ ಚಿತ್ರಗಳೊಂದಿಗೆ ತನದೇ ಆದಂತ ಛಾಪು ಮೂಡಿಸಿದ ಹಾಲಿವುಡ್ ನಟ ಡೇನಿಯಲ್ಲ್ ಕ್ರೆಗ್. ಬಾಂಡ್ ಸರಣಿಯಲ್ಲಿ ಬಂದ ಕ್ಯಾಸಿನೋ ರಾಯಲ್, ಕ್ವಾಂಟಮ್ ಆಫ್ ಸೊಲೇಸ್, ಸ್ಕೈಫಾಲ್, ಸ್ಪೆಕ್ಟರ್ ಚಿತ್ರಗಳು ಕ್ರೆಗ್‌ಗೆ ಒಳ್ಳೆಯ ಹೆಸರು ತಂದುಕೊಟ್ಟಂತವು.
 
ಆ ಚಿಚಿತ್ರಗಳ ಬಳಿಕ ತಾನಿನ್ನು ಬಾಂಡ್ ಸಿನಿಮಾಗಳಲ್ಲಿ ಅಭಿನಯಿಸಲ್ಲ ಎಂದು ಕ್ರೆಗ್ ಹೇಳಿದ್ದರು. ಆದರೆ ತಾಜಾ ಸಮಾಚಾರದ ಪ್ರಕಾರ ಕ್ರೆಗ್ ಮತ್ತೆ ಬಾಂಡ್ ಸಿನಿಮಾಗಳಲ್ಲಿ ನಟಿಸುವ ಸಾಧ್ಯತೆ ಇದೆಯಂತೆ.
 
ಕ್ರೆಗ್ ಅಭಿನಯಿಸುತ್ತಿರುವ ತಾಜಾ ಚಿತ್ರ ಒಥೆಲ್ಲೋ. ಈ ಚಿತ್ರದ ನಿರ್ಮಾಪಕ ಅವರನ್ನು ಒಪ್ಪಿಸಿದ್ದಾಗಿ ಗೊತ್ತಾಗಿದೆ. ಮತ್ತೆ ಕ್ರೆಗ್ ಜೇಮ್ಸ್ ಬಾಂಡ್ ಆಗಿ ಕಾಣಿಸುತ್ತಾರೋ ಇಲ್ಲವೋ ಎಂದು ಗೊತ್ತಾಗಬೇಕಾದರೆ ಸ್ವಲ್ಪ ದಿನ ಕಾಯಲೇ ಬೇಕು. ಜೇಮ್ಸ್ ಬಾಂಡ್ ಸಿನಿಮಾಗಳಿಗಾಗಿ ಕ್ರೆಗ್ ಸಾಕಷ್ಟು ಬೆವರು ಹರಿಸಿ ಮೈ ಹುರಿಗಟ್ಟಿಸಿಕೊಂಡು ಸಾಹಸ ಸನ್ನಿವೇಶಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದನ್ನು ಇಲ್ಲಿ ಸ್ಮರಿಸಬಹುದು. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ