ಕಾಜಲ್ ಅಗರ್‌ವಾಲ್ ರಂದೀಪ್ ಮಧ್ಯೆ ಖುಷ್-ಖುಷಿಯಾದ 'ಸಿಂಪಲ್ ಲವ್ ಸ್ಟೋರಿ'

ಶುಕ್ರವಾರ, 3 ಜೂನ್ 2016 (11:13 IST)
ಸರಬ್ಜಿತ್ ಚಿತ್ರದ ಬಳಿಕ ರಂದೀಪ್ ಹೂಡಾ ದೋ ಲಫ್ಜೋಂಕಿ ಕಹಾನಿ' ಚಿತ್ರದಲ್ಲಿ ಅಗರವಾಲ್ ಜತೆಗೆ ಲವ್ ಡ್ಯೂಯೆಟ್ ಹಾಡಲಿದ್ದಾರೆ. ಆದ್ರೆ ಈ ಚಿತ್ರದಲ್ಲಿ ಇಬ್ಬರ ಲವ್ ಸ್ಟೋರಿಯ ಕ್ಲೈಮ್ಯಾಕ್ಸ್ ಏನಿರಬಹುದು ಎಂಂಬುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. 
ಇನ್ನೂ ಚಿತ್ರ ಜೂನ್ 10ಕ್ಕೆ ರಿಲೀಲ್ ಆಗುತ್ತಿದೆ. ಚಿತ್ರದಲ್ಲಿ ಲವ್ ಸ್ಟೋರಿ ಅಸಾಮಾನ್ಯ ರೀತಿಯಲ್ಲಿ ಮೂಡಿ ಬಂದಿದ್ದು, ಇನ್ನೂ ರಂದೀಪ್ ಹೂಡಾ ಅವರ ಚಿತ್ರದ ಕ್ಯಾರೆಕ್ಟರ್ ಇಂಟರ್‌ಸ್ಟಿಂಗ್‌ಯಾಗಿದ್ದು, ಅಂಧಳ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾಜಲ್ ಅಗರವಾಲ್ ಲವ್ ಕಹಾನಿಯ ಕ್ಲೈಮ್ಯಾಕ್ಸ್ ಏನಿರಬಹುದು ಎಂಬುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. 

ಇನ್ನೂ ಈ ಚಿತ್ರದಲ್ಲಿ ಅಂಧ ಪಾತ್ರಕ್ಕಾಗಿ ಕಾಜಲ್, ವರ್ಕ್‌ಶಾಪ್ ಹಾಗೂ ಸ್ಪೆಷಲ್ ಕ್ಲಾಸ್‌ಗಳಿಗೆ ಅಟೆಂಡ್ ಆಗಿದ್ದಾರು ಅವರು, ಅಂಧರನ್ನು ನೋಡಿ ನಟನೆ ಕಲಿಯುತ್ತಿದ್ದಾರಂತೆ. ಬ್ಲೈಡ್ ಜನರ ಸ್ಪೆಷಲ್ ಬಗ್ಗೆ ತಿಳಿದುಕೊಂಡಿದ್ದೇನೆ ಎಂದು ಕಾಜಲ್ ಅಗರ್‌ವಾಲ್ ಈ ಹಿಂದೆ ತಿಳಿಸಿದ್ದರು. 
 
ಮೊನ್ನೆ  'ದೋ ಲಫ್ಜೋಂಕಿ ಕಹಾನಿ' ಚಿತ್ರದ ಹಾಡುಗಳು ಮೆಲೋಡಿಯಸ್ ಆಗಿದ್ದು. ನಿಮ್ಮಗೆ ಲೈಕ್ ಆಗದೇ ಇರದು. ಕಾಜಲ್ ಅಗರ್‌ವಾಲ್‌ರ ಒಂದೊಂದು ಸ್ಟೆಪ್‌ಗಳು ನಿಮ್ಮನ್ನ ಸೆಳೆಯಲಿವೆ.
 
ಇನ್ನೂ ಮ್ಯೂಸಿಕ್ ಅರ್ಮಾನ್ ಮಲ್ಲಿಕ್‌ರದ್ದು. ಅರ್ಮಾನ್ ಮಲ್ಲಿಕ್ ಅವರ ಧ್ವನಿ ಯುವಕರಿಗೆ ಲೈಕ್ ಆಗಲಿದೆ. ದೋ ಲಫ್ಜೋಂಕಿ ಕಹಾನಿ' ಚಿತ್ರದಲ್ಲಿ ಕಾಜಲ್ ಅಗರ್‌ವಾಲ್ ಹಾಗೂ ರಂದೀಪ್ ಹೂಡಾ ಅಭಿನಯ ಅಮೋಘವಾಗಿ ಮೂಡಿ ಬಂದಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ