ದೀಪಿಕಾ ಪಡುಕೋಣೆ ಬಗ್ಗೆ ಸಹನಟ ಹೇಳಿದ್ದೇನು?
ನವದೆಹಲಿ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿರುವುದು ಸುದ್ದಿಯಾಗಿತ್ತು. “ಎಕ್ಸ್ ಎಕ್ಸ್ ಎಕ್ಸ್: ರಿಟರ್ನ್ ಆಫ್ ಕ್ಸೆಂಡರ್ ಕೇಜ್” ಎಂಬ ಈ ಚಿತ್ರದ ನಾಯಕ ವಿನ್ ಡಿಸೆಲ್ ದೀಪಿಕಾ ಬಗ್ಗೆ ಕಾಮೆಂಟ್ ಮಾಡಿದ್ದಾರೆ.
“ಆಕೆಯ ಜತೆ ಕೆಲಸ ಮಾಡಿದ ಪ್ರತಿ ನಿಮಿಷವನ್ನೂ ನಾನು ಎಂಜಾಯ್ ಮಾಡಿದ್ದೇನೆ. ನನಗೆ ಆಕೆಯನ್ನು ಇಷ್ಟವಾಯ್ತು. ನಮ್ಮಿಬ್ಬರ ಕೆಮಿಸ್ಟ್ರಿ ಸಹಜವಾಗಿತ್ತು. ಆಕೆಯ ಜತೆ ಕಳೆದ ಕ್ಷಣಗಳೆಲ್ಲವೂ ಸುಮಧುರ” ಎಂದು ಟಿವಿಯೊಂದಕ್ಕೆ ಸಂದರ್ಶನ ನೀಡುವಾಗ ಹೇಳಿಕೊಂಡಿದ್ದಾರೆ.
ಇನ್ನೂ ಮುಂದುವರಿದು ಆಕೆಯ ಬಗ್ಗೆ ನನಗಿರುವ ಪ್ರೀತಿಯನ್ನು ಮಾತಿನಲ್ಲಿ ಹೇಳಲಾರೆ. ನಮ್ಮ ನಡುವೆ ನೀರಿನಲ್ಲಿ ಬರುವ ದೃಶ್ಯವೊಂದಿದೆ ಅದು ನನ್ನ ಫೇವರಿಟ್ ಎಂದು ಹೇಳಿಕೊಂಡಿದ್ದಾರೆ. ಮೊದಲ ಹಾಲಿವುಡ್ ಸಿನಿಮಾಗೆ ಈ ಪರಿಯ ಮೆಚ್ಚುಗೆ ಸಿಕ್ಕಿದ್ದು ಸಾಕಲ್ವಾ ದೀಪಿಕಾಗೆ?