ಈ ನಟನ ತಿಂಗಳ ಖರ್ಚು ಬರೋಬ್ಬರಿ ರೂ.13 ಕೋಟಿ

ಗುರುವಾರ, 2 ಫೆಬ್ರವರಿ 2017 (11:35 IST)
ಹಾಲಿವುಡ್ ಜನಪ್ರಿಯ ಚಿತ್ರ ಪೈರೇಟ್ಸ್ ಆಫ್ ದಿ ಕೆರೇಬಿಯನ್ ಖ್ಯಾತಿಯ ಜಾನಿ ಡೇಪ್ ತಿಂಗಳ ಅಕ್ಷರಶಃ ರೂ.13.5 ಕೋಟಿಯಂತೆ! ಇಷ್ಟೆಲ್ಲಾ ಖರ್ಚು ಮಾಡಿಮಾಡಿ ಈಗ ಜಾನಿ ಆರ್ಥಿಕ ಪರಿಸ್ಥಿತಿ ಡೋಲಾಯಮಾನವಾಗಿದೆಯಂತೆ. ಹಣಕ್ಕಾಗಿ ಒದ್ದಾಡುವಂತಾಗಿದೆಯಂತೆ.
 
ದಿ ಮ್ಯಾನೇಜ್‌ಮೆಂಟ್ ಗ್ರೂಪ್‌ನಿಂದ (ಟಿಎಂಜಿ) ಮ್ಯಾನೇಜರ್‌ಗಳನ್ನು ಹೊರಹಾಕಿ ಈಗ ಕಂಪೆನಿ ಮೇಲೆ ಕೇಸು ಹಾಕಿದ್ದಾರೆ. ಆದರೆ ಟಿಎಂಜಿ ರಿವರ್ಸ್ ಗೇರನಲ್ಲಿ ಜಾನ್ ಮೇಲೆ ಕೇಸು ನಮೂದಿಸಿದೆ. ತಿಂಗಳಿಗೆ ಜಾನಿ 2 ಮಿಲಿಯನ್ ಡಾಲರ್ ಹಣ ಖರ್ಚು ಮಾಡುತ್ತಾ ತನ್ನ ಕೈಯಾರೆ ಈ ಪರಿಸ್ಥಿತಿ ಸೃಷ್ಟಿಸಿಕೊಂಡಿದ್ದಾನೆ ಎಂದು ದೂರಿದೆ.
 
ಇದಿಷ್ಟೇ ಅಲ್ಲದೆ ಜಾನ್ ಡೇಪ್ ತಿಂಗಳ ಬಜೆಟ್ ವಿಷಯವನ್ನೂ ವಿವರಿಸಿದೆ. ವಿಶ್ವದಾದ್ಯಂತ ಜಾನಿಗೆ 75 ಮಿಲಿಯನ್ ಡಾಲರ್ ಎಂದರೆ ರೂ.500 ಕೋಟಿ ಬೆಲೆಬಾಳುವ 14 ವಿಲ್ಲಾಗಳಿವೆ. ರೂ.120 ಕೋಟಿ ಕೊಟ್ಟು 150 ಅಡಿಗಳ ನೌಕೆ ಖರೀದಿಸಿದ್ದಾರೆ. ಪ್ರತಿ ತಿಂಗಳು 20 ಲಕ್ಷ ಖರ್ಚು ಮಾಡಿ ಜಗತ್ತಿನಲ್ಲೇ ಅತ್ಯಂತ ದುಬಾರಿ ಮದ್ಯವನ್ನು ತರಿಸಿಕೊಳ್ಳುತ್ತಿದ್ದಾರೆ. 
 
ಟಿಎಂಜಿಯಿಂದ ಡೇಪ್ ಸುಮಾರು 5 ಮಿಲಿಯನ್ ಡಾಲರ್ ಸಾಲ ಪಡೆದಿದ್ದು ಸಾಲ ಮರುಪವತಿಸಲು ನಿರಾಕಸಿದ್ದಾರೆ. ತನ್ನ ಆರ್ಥಿಕ ಸಮಸ್ಯೆಗೆ ಕಂಪೆನಿಯೇ ಕಾರಣ ಎಂದು ಕೇಸು ನಮೂದಿಸಿದ್ದಾರೆ. ಕಳೆದ 17 ವರ್ಷಗಳಿಂದ ಯಾವುದೇ ಆರ್ಥಿಕ ಸಮಸ್ಯೆ ಬರದಂತೆ ಕಂಪೆನಿ ನೋಡಿಕೊಂಡಿತ್ತೆಂದು, ಈ ಪರಿಸ್ಥಿತಿಗೆ ಡೇಪ್ ಮಿತಿಮೀರಿದ ಹವ್ಯಾಸಗಳೇ ಕಾರಣ ಎಂದು ಕಂಪೆನಿ ತಿಳಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ