ನಗ್ನ ಸೆಲ್ಫಿ ಚಿತ್ರಗಳನ್ನು ಅಪ್ಲೋಡ್ ಮಾಡಿದ ಕಿಮ್ ಕರದರ್ಶನ್

ಶನಿವಾರ, 17 ಸೆಪ್ಟಂಬರ್ 2016 (16:30 IST)
ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ನಗ್ನ ಚಿತ್ರಗಳನ್ನು ಅಪ್ಲೋಡ್ ಮಾಡುವ ಮೂಲಕ ವಿಶ್ವದಾದ್ಯಂತ ಪಡ್ಡೆಹುಡುಗರ ನಿದ್ದೆಗೆಡಿಸಿರುವ ರಿಯಾಲಿಟಿ ಟಿವಿ ಖ್ಯಾತಿಯ ಕಿಮ್ ಕರದರ್ಶನ್ ಮತ್ತೊಮ್ಮೆ ನಗ್ನ ಸೆಲ್ಫಿ ಚಿತ್ರಗಳನ್ನು ಅಪ್ಲೋಡ್ ಮಾಡಿ ಯುವಕರ ನಿದ್ದೆಗೆಡಿಸಿದ್ದಾಳೆ.
ಕರದರ್ಶನ್ 31 ಕೆಜಿ ದೇಹದ ಭಾರವನ್ನು ಇಳಿಸಿಕೊಂಡಿದ್ದು, ಹೋಟೆಲ್‌ನ ಕೋಣೆಯಲ್ಲಿ ಸಂಪೂರ್ಣ ನಗ್ನಳಾಗಿ ಸೆಲ್ಫಿ ಚಿತ್ರಗಳನ್ನು ತೆಗೆದು ಸಾಮಾಜಿಕ ಅಂತರ್ಜಾಲ ತಾಣಗಳಿಗೆ ಅಪ್ಲೋಡ್ ಮಾಡಿದ್ದಾಳೆ.
 
ಇನ್‌ಸ್ಟಾಗ್ರಾಂ ಮತ್ತು ಟ್ವಿಟ್ಟರ್‌ನಲ್ಲಿ ಸೆಲ್ಫಿ ಚಿತ್ರಗಳನ್ನು ಪೋಸ್ಟ್ ಮಾಡಿರುವ ಕಿಮ್, ದೇಹದ ಸೌಂದರ್ಯವನ್ನು ಮುಚ್ಚಿಸಿಕೊಳ್ಳಲು ಕೇವಲ ತನ್ನ ಕೈಗಳನ್ನು ಬಳಸಿಕೊಂಡಿದ್ದಾಳೆ. ತನ್ನ ಅರ್ಧದಷ್ಟು ಮುಖವನ್ನು ಫೋನ್‌ನಿಂದ ಮುಚ್ಚಿಕೊಂಡಿದ್ದಾಳೆ.
 
ಇದಕ್ಕಿಂತ ಮೊದಲು, 35 ವರ್ಷದ ಕರದರ್ಶನ್ ಕಳೆದ ಮಾರ್ಚ್ ತಿಂಗಳಲ್ಲಿ ತನ್ನ ಸಂಪೂರ್ಣ ನಗ್ನ ದೇಹದ ಚಿತ್ರಗಳನ್ನು ಸಾಮಾಜಿಕ ಜಾಲ ತಾಣಗಳಿಗೆ ಅಪ್ಲೋಡ್ ಮಾಡುವ ಮೂಲಕ ಖ್ಯಾತಿ ಪಡೆದಿದ್ದಳು. 
 
ಕಿಮ್ ಕರದರ್ಶನ್ ನಗ್ನ ಚಿತ್ರಗಳನ್ನು ಸಾಮಾಜಿಕ ಜಾಲ ತಾಣಗಳಿಗೆ ಅಪ್ಲೋಡ್ ಮಾಡಿರುವುದನ್ನು ಹಾಲಿವುಡ್ ನಟ ಬೆಟ್ಟೆ ಮಿಡ್ಲರ್ ಟೀಕಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ