`ಅತ್ಯಾಚಾರ, ಭೀಕರ ಕೊಲೆಗೆ ಮಾನಸಿಕವಾಗಿ ಸಿದ್ಧವಾಗಿಬಿಟ್ಟಿದ್ದೆ’

ಸೋಮವಾರ, 20 ಮಾರ್ಚ್ 2017 (15:41 IST)
ಕಳೆದ ವರ್ಷ ಅಕ್ಟೋಬರ್ 3ರಂದು ಪ್ಯಾರಿಸ್`ನಲ್ಲಿ ನಡೆದ ಕಿಮ್ ಕರ್ದಾಶಿಯನ್ ಮನೆಯಲ್ಲಿ ನಡೆದ ದರೋಡೆಯ ಕ್ಷಣಗಳಿವು. ಪ್ಯಾರಿಸ್`ನಲ್ಲೇ ಅತ್ಯಂತ ದೊಡ್ಡ ದರೋಡೆ ಇದಾಗಿದ್ದು, 10 ಮಿಲಿಯನ್ ಡಾಲರ್ ಮೌಲ್ಯದ ಆಭರಣಗಳನ್ನ ದೋಚಿದ್ದರು. ಅವತ್ತಿನ ದಿನದ ಘಟನೆ ಇವತ್ತಿಗೂ ಕರ್ದಾಶಿಯನ್`ಗೆ ದುಃಸ್ವಪ್ನವಾಗಿ ಕಾಡುತ್ತಿದೆ. ಈ ಬಗ್ಗೆ ಇದೇ ಮೊದಲ ಬಾರಿಗೆ ಕಿಮ್ ತನ್ನ ಸಹೋದರಿ ಮುಂದೆ ತಮ್ಮ ನೋವು ತೋಡಿಕೊಂಡಿದ್ದಾರೆ.

`ಅವತ್ತು ನನ್ನ ಮನೆಗೆ 17 ದರೋಡೆಕೋರರು ನುಗ್ಗಿದ್ದರು. ನನ್ನ ಕಾಲನ್ನ ಹಿಡಿದೆಳೆದ ದರೋಡೆಕೋರ ಹಾಸಿಗೆ ಮೇಲೆ ಹಾಕಿದ. ಈ ಸಂದರ್ಭ ನನ್ನ ದೇಹದ ಕೆಳಭಾಗದಲ್ಲಿ ಬಟ್ಟೆ ಇರಲಿಲ್ಲ. ಓ ಇವರು ನನ್ನ ಮೇಲೆ ರೇಪ್ ಮಾಡುತ್ತಾರೆ ಎಂದುಕೊಂಡು ಮಾನಸಿಕವಾಗಿ ಆ ಭೀಕರ ಹಿಂಸೆ ಅನುಭವಿಸಲು ಸಜ್ಜಾಗಿಬಿಟ್ಟಿದ್ದೆ. ಆದರೆ, ಅವನು ಅತ್ಯಾಚಾರಕ್ಕೆ ಮುಂದಾಗಲಿಲ್ಲ. ಕಾಲಿಗೆ ಟೇಪ್ ಹಾಕಿದ ದರೊಡೆಕೋರರು ನನ್ನ ಕಡೆ ಗನ್ ತಿರುಗಿಸಿದರು. ನನ್ನ ತಲೆಗೆ ಗುಂಡಿಟ್ಟು ಕೊಲ್ಲುತ್ತಾರೆ ಎಂದುಕೊಂಡೆ. ಆದರೆ, ಅವರು ಅದ್ಯಾವುದನ್ನೂ ಮಾಡಲಿಲ್ಲ. ಹಣ ಎಲ್ಲಿದೆ ಎಂದು ಕೇಳಿದರು ಇಲ್ಲವೆಂದೆ. ವಜ್ರಾಭರಣ ದೋಚಿದ ಬಳಿಕ ನನ್ನನ್ನ ಕಟ್ಟಿ ಬಾತ್ ರೂಮಲ್ಲಿ ಕೂಡಿಹಾಕಿ ಹೊರಟುಹೋದರು ಎಂದು ಕಿಮ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ