ಆಸ್ಕರ್ ಪ್ರಶಸ್ತಿ ಪ್ರಕಟ; ಅತ್ಯುತ್ತಮ ಚಿತ್ರ ಮೂನ್‍ಲೈಟ್

ಸೋಮವಾರ, 27 ಫೆಬ್ರವರಿ 2017 (13:23 IST)
ಇಡೀ ಜಗತ್ತಿನ ಚಿತ್ರಪ್ರೇಮಿಗಳು ಎದುರು ನೋಡುತಿರುವ ಆಸ್ಕರ್ ಪ್ರಶಸ್ತಿಗಳು ಪ್ರಕಟವಾಗಿವೆ. 89ನೇ ಆಸ್ಕರ್ ಪ್ರಶಸ್ತಿ ಪ್ರದಾನ
ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿದೆ. ಹಾಲಿವುಡ್ ಚಿತ್ರರಂಗಕ್ಕೆ ಸಂಬಂಧಿಸಿದ ಹಲವಾರು ತಾರೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೆರುಗು ನೀಡಿದರು.
 
ವರ್ಣರಂಜಿತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇವರು, ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಿದ್ದರೆ ಎಲ್ಲರ ಕಣ್ಣು ಅವರ ಮೇಲೆ ಬೀಳುತ್ತಿತ್ತು. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತನ್ನದೇ ಆದಂತಹ ವಿಶೇಷ ಉಡುಗೆಯಲ್ಲಿ ಎಲ್ಲರ ಗಮನಸೆಳೆದರು.
 
89ನೇ ಆಸ್ಕರ್ ಪ್ರಶಸ್ತಿಗೆ ಭಾಜನರಾದವರ ಪಟ್ಟಿ
* ಅತ್ಯುತ್ತಮ ಚಿತ್ರ: ಮೂನ್‍ಲೈಟ್
* ಅತ್ಯುತ್ತಮ ನಟಿ: ಎಮ್ಮಾ ಸ್ಟೋನ್ (ಲಾ ಲಾ ಲ್ಯಾಂಡ್)
* ಅತ್ಯುತ್ತಮ ನಟ: ಕಸೆ ಎಫ್ಲೆಕ್ (ಮ್ಯಾಂಚೆಸ್ಟರ್ ಬೈದ ಸೀ)
* ಅತ್ಯುತ್ತಮ ನಿರ್ದೇಶಕ: ಡೇಮಿಯನ್ ಚಾಜೆಲ್ (ಲಾ ಲಾ ಲ್ಯಾಂಡ್)
* ಅಡಾಪ್ಟೆಡ್ ಚಿತ್ರಕಥೆ: ಮೂನ್‌ಲೈಟ್ (ಬ್ಯಾರಿ ಜೆನ್ಕಿನ್ಸ್, ಟರೆಲ್ ಅಲ್ವಿನ್ ಮೆಕ್‌ಕ್ರನೆ)
* ಅತ್ಯುತ್ತಮ ಚಿತ್ರಕಥೆ: ಮಾಂಚೆಸ್ಟರ್ ಬೈದ ಸೀ (ಕನ್ನೆತ್ ಲಾನೋರ್ಗಾನ್)
* ಅತ್ಯುತ್ತಮ ಒರಿಜಿನಲ್ ಹಾಡು: ಸಿಟಿ ಆಫ್ ಸ್ಟಾರ್ಸ್ (ಲಾ ಲಾ ಲ್ಯಾಂಡ್)
* ಅತ್ಯುತ್ತಮ ಒರಿಜಿನಲ್ ಸಂಗೀತ: ಲಾ ಲಾ ಲ್ಯಾಂಡ್
* ಅತ್ಯುತ್ತಮ ಛಾಯಾಗ್ರಹಣ: ಲಾ ಲಾ ಲ್ಯಾಂಡ್ (ಲಿನಸ್ ಶಾನ್‌ಗ್ರೆನ್)
* ಅತ್ಯುತ್ತಮ ಲೈವ್ ಆಕ್ಷನ್ ಶಾರ್ಟ್ : ಸಿಂಗ್ (ಕ್ರಿಸ್ಟಫ್ ಡಿಕ್, ಅನ್ನಾ ಯುಡ್ವರ್ಟಿ)
* ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ: ದ ವೈಟ್ ಹೆಲ್ಮೆಟ್ಸ್ (ಓರ್ಲಾಂಡ್ ವೋನ್ ಇನ್ಸಿಡೆಲ್, ಜೊನ್ನಾ ನಟಸೆಗರ)
* ಅತ್ಯುತ್ತಮ ಸಂಕಲನ: ಹಕ್ಸಾ ರಿಡ್ಜ್ (ಜಾನ್ ಗಿಲ್ಬರ್ಡ್)
* ಅತ್ಯುತ್ತಮ ವಿಜುವಲ್ ಎಫೆಕ್ಟ್ : ದ ಜಂಗಲ್ ಬುಕ್ (ರಾಬರ್ಟ್ ಲಿಗಾಟೋ, ಆಡಮ್ ವಾಲ್ಡೆಜ್, ಆಂಡ್ರೂ ಆರ್ ಜಾನ್ಸ್, ಡ್ಯಾನ್ ಲೆಮನ್)
* ಅತ್ಯುತ್ತಮ ವಿನ್ಯಾಸ: ಲಾ ಲಾ ಲ್ಯಾಂಡ್ (ಡೇವಿಡ್ ವಾಸ್ಕೋ, ಶಾಂಡಿ ರೆನಾಲ್ಡ್ಸ್)
* ಯುನೈಟೆಡ್ ಕಿರುಚಿತ್ರ: ಹೈಪರ್ (ಅಲಾನ್ ಸರಿಲ್ಲರೋ, ಮಾರ್ಕ್ ಸನ್ಡೆಲ್‌ಮೆರ್)
* ಅತ್ಯುತ್ತಮ ಅನಿಮೇಟೆಡ್ ಚಿತ್ರ: ಜೂಟೋಪಿಯಾ (ಬೈರಾನ್ ಹೋವರ್ಡ್, ರಿಚ್ ಮೂರೆ, ಕ್ಲಾರ್ಕ್ ಸ್ಪೆನ್ಸರ್)
ಅತ್ಯುತ್ತಮ ವಿದೇಶಿ ಚಿತ್ರ: ಸೇಲ್ಸ್‌ಮ್ಯಾನ್ (ಇರಾನ್)
* ಅತ್ಯುತ್ತಮ ಪೋಷಕ ನಟಿ : ವಿವೋಲಾ ಡೇವಿಸ್ (ಫೆನ್ಸೆಸ್)
* ಅತ್ಯುತ್ತಮ ಸೌಂಡ್ ಮಿಕ್ಸಿಂಗ್: ಅರೈವಲ್ (ಬೆಲ್ಲಿಮೂರ್)
* ಅತ್ಯುತ್ತಮ ಡಾಕ್ಯುಮೆಂಟರಿ ಫೀಚರ್: ಒ.ಜೆ. ಮೇಡ್ ಇನ್ ಅಮೆರಿಕಾ (ಎಜ್ರಾ ಎಡಿಲ್‍ಮ್ಯಾನ್, ಕರೋಲೈನ್ ವಾಟರ್ಲೋ)
* ಅತ್ಯುತ್ತಮ ವಸ್ತ್ರ ವಿನ್ಯಾಸ: ಫೆಂಟಾಸ್ಟಿಕ್ ಬಿಸ್ಟ್ಸ್ ಇನ್ ಅಮೆರಿಕಾ (ಕೊಲೆನ್ ಎಟ್‌ಉಡ್)
*ಅತ್ಯುತ್ತಮ ಅಲಂಕಾರ, ಕೇಶವಿನ್ಯಾಸ: ಸೂಸೈಡ್ ಸ್ಕ್ವಾಡ್ (ಅಲ್ಸಾಂಡ್ರೋ ಬೆರ್ಟಾಲ್ಜಿ, ಜಿರ್ಡಿಯೋ ಗೆಗ್ರೇರಿಯನ್, ಕ್ರಿಸ್ಟೋಫರ್ ನೀಲ್ಸನ್)
* ಅತ್ಯುತ್ತಮ ಪೋಷಕ ನಟ: ಮಹೇರ್ಷಲ ಅಲಿ (ಮೂನ್‌ಲೈಟ್)

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ