ಮಾದಕ ವ್ಯಸನಿಯಾಗಿದ್ದ ಸ್ಟಾರ್ ವಾರ್ಸ್ ನಟಿ ಇನ್ನಿಲ್ಲ

ಗುರುವಾರ, 29 ಡಿಸೆಂಬರ್ 2016 (12:22 IST)
ಸ್ಟಾರ್ ವಾರ್ಸ್ ಸಿನಿಮಾದಲ್ಲಿ ಅಭಿನಯಿಸಿದ್ದ ಹಾಲಿವುಡ್ ಪ್ರಸಿದ್ದ ನಟಿ ಕ್ವಾರಿ ಫಿಷರ್ (60) ನಿಧನರಾಗಿದ್ದಾರೆ. ”ತಮ್ಮ ತಾಯಿ ನಿಧನರಾದರೆಂದು ಮಂಗಳವಾರ ಬೆಳಗ್ಗೆ ಕ್ವಾರಿ ಪುತ್ರಿ ಬಿಲ್ಲಿ ಲೌರ್ಡ್” ಮಾಧ್ಯಮಗಳಿಗೆ ತಿಳಿಸಿದ್ದಾರೆ. 
 
ಮಾದಕ ವ್ಯಸನಿಯಾಗಿದ್ದ ಕ್ವಾರಿ ಅನಾರೋಗ್ಯಕ್ಕೆ ತುತ್ತಾಗಿ ಬಹಳ ದಿನಗಳಿಂದ ನರಳುತ್ತಿದ್ದರು. ಆರೋಗ್ಯ ಇನ್ನಷ್ಟು ಕ್ಷೀಣಿಸಿ ಚಿಕಿತ್ಸೆಗಾಗಿ ಅವರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಪರಿಸ್ಥಿತಿ ವಿಷಮಿಸಿದ್ದ ಕಾರಣ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನುತ್ತವೆ ಮೂಲಗಳು.
 
  1975ರಲ್ಲಿ ಶಾಂಪೂ ಅನ್ನೋ ಚಿತ್ರದ ಮೂಲಕ ಬೆಳ್ಳಿಪರದೆಗೆ ಅಡಿಯಿಟ್ಟಿದ್ದರು ಕ್ವಾರಿ. ಅಸ್ಟಿನ್ ಪವರ್ಸ್, ದಿ ಬ್ಲೂಸ್ ಬ್ರದರ್ಸ್, ಚಾರ್ಲಿಸ್ ಏಂಜೆಲ್, ಹನ್ನಾ ಅಂಡ್ ಹರ್ ಸಿಸ್ಟರ್ಸ್, ಸ್ಕ್ರೀಮ್ 3 ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ 1977ರಲ್ಲಿ ನಟಿಸಿದ ಸ್ಟಾರ್ ವಾರ್ಸ್ ಚಿತ್ರ ಮಾತ್ರ ಅವರಿಗೆ ಅಪಾರ ಕೀರ್ತಿ ಹೆಸರು ತಂದುಕೊಟ್ಟಿತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ