ಆಲ್ಬಂ ಬಿಡುಗಡೆಗೆ ಬ್ರಿಟ್ನಿಯ ಅಬ್ಬರದ ಪ್ರಚಾರ

'ಫೆಮ್ಮಿ ಫೆಟೆಲ್' ಮೇ ತಿಂಗಳಲ್ಲಿ ಬಿಡುಗಡೆಗೊಳ್ಳಲಿರುವ ಬಹುನಿರೀಕ್ಷೆಯ ಆಲ್ಬಂ. ಪಾಪ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಈ ಆಲ್ಬಂ ಬಿಡುಗಡೆಗೆ ಬರದ ಸಿದ್ದತೆ ನಡೆಸಿದ್ದಾರೆ. ಇದರ ಪ್ರಚಾರಾರ್ಥ ಇತ್ತೀಚೆಗೆ ಪ್ರಸಿದ್ಧ ವಾಹಿನಿಯೊಂದರಲ್ಲಿ 'ಗುಡ್ ಮಾರ್ನಿಂಗ್ ಅಮೆರಿಕಾ' ಎಂಬ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದರು.

ಈ ಕಾರ್ಯಕ್ರಮ ಮುಂದಿನ ತಿಂಗಳು ಬಿಡುಗಡೆಯಾಗಲಿರುವ 'ಫೆಮ್ಮಿ ಫೆಟೆಲ್' ಸಿಡಿಯ ಅದ್ದೂರಿ ಸಮಾರಂಭದ ಒಂದು ತುಣುಕು ಅಷ್ಟೆ ಎಂದು ತನ್ನ ಅಭಿಮಾನಿಗಳಲ್ಲಿ ಕಿಚ್ಚು ಎಬ್ಬಿಸಿದ್ದಾರೆ ಬ್ರಿಟ್ನಿ ಸ್ಪಿಯರ್ಸ್.

ವೆಬ್ದುನಿಯಾವನ್ನು ಓದಿ