ಆಸ್ಕರ್ ನಿರೀಕ್ಷೆಯಲ್ಲಿ 'ದಿ ಗೋರಿ ಗರ್ಲ್ಸ್' ಆರಂಭ

ಹಾಲಿವುಡ್ ನಟಿ, ನಿರ್ದೇಶಕಿ ಜೆನಿಫರ್ ಅನಿಸ್ಟನ್ 'ದಿ ಗೋರಿ ಗರ್ಲ್ಸ್' ಚಿತ್ರವನ್ನು ನಿರ್ಮಿಸಲಿದ್ದಾರೆ. 1940 ರಲ್ಲಿ ಗೋರಿ ದ್ವೀಪದ ಜೈಲಿನಲ್ಲಿ ಸೆರೆಯಾಳಾಗಿದ್ದ ಎಂಟು ಮಂದಿ ಪಾಶ್ಚಾತ್ಯ ಗಾಯಕಿಯರ ಜೀವನ ಗಾತೆಯನ್ನು ಈ ಚಿತ್ರ ಒಳಗೊಂಡಿದೆ.

ಈ ಚಿತ್ರದ ಚಿತ್ರೀಕರಣ 2009ರಲ್ಲೇ ಸೆಟ್ಟೇರಿತ್ತು. ಆದರೆ 2010ರ ಜನವರಿಯಿಂದ 'ಜಸ್ಟ್‌ ಗೊ ವಿತ್ ಇಟ್' ಚಿತ್ರದಲ್ಲಿ ನಟಿಸಬೇಕಿದ್ದರಿಂದ ಜೆನಿಫರ್ ಅನಿಸ್ಟನ್ ತನ್ನ ಬಹುದಿನದ ಕನಸಿನ ಚಿತ್ರ 'ದಿ ಗೋರಿ ಗರ್ಲ್ಸ್' ಚಿತ್ರೀಕರಣವನ್ನು ಮುಂದೂಡಿದ್ದರು.

ಹಿಂದೊಮ್ಮೆ ಹೆಸರುವಾಸಿಯಾಗಿದ್ದ 'ಡಿಕ್ಸಿ ಚಿಕ್ಸ್' ಅವರ ಕಥೆಯನ್ನೂ ಇಲ್ಲಿ ಸೇರಿಸಲಾಗಿದೆ. ಆಸ್ಕರ್ ಪ್ರಶಸ್ತಿ ನಿರೀಕ್ಷೆಯಲ್ಲಿ ಚಿತ್ರ ನಿರ್ಮಿಸುತ್ತಿರುವುದಾಗಿ ನಟಿ ಜೆನಿಫರ್ ಅನಿಸ್ಟನ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ