ಎಮ್ಮಾ ವ್ಯಾಟ್ಸನ್ ಕಾಲೇಜಿಗೆ ಚಕ್ಕರ್

ಸುಪ್ರಸಿದ್ದ ಹಾಲಿವುಡ್ ಚಿತ್ರ 'ಹ್ಯಾರಿ ಪಾಟರ್' ಸ್ಟಾರ್ ಎಮ್ಮಾ ವ್ಯಾಟ್ಸನ್ ಚಲನ ಚಿತ್ರಗಳಲ್ಲಿ ಫುಲ್ ಬ್ಯುಸಿಯಾಗಿರುವುದರಿಂದ ಕಾಲೇಜಿಗೆ ಹಾಜರಾಗಲು ಆಗುತ್ತಿಲ್ಲವಂತೆ.

20 ವರ್ಷದ ಹಾಲಿವುಡ್ ಸ್ಟಾರ್ ಎಮ್ಮಾ ವ್ಯಾಟ್ಸನ್ ಅಮೆರಿಕಾದ ಬ್ರೌನ್ ವಿಶ್ವ ವಿದ್ಯಾಲಯದಲ್ಲಿ ಸಾಹಿತ್ಯ ಪದವಿ ವ್ಯಾಸಾಂಗ ಮಾಡುತ್ತಿದ್ದಾರೆ.

'ದಿ ಡೆತ್ಲಿ ಹಾಲ್ಲೊವ್ಸ್' ಚಿತ್ರದ ಎರಡನೇ ಭಾಗವನ್ನು ಈಗತಾನೆ ಮುಗಿಸಿದ್ದರೂ ತನ್ನನ್ನು ವಿದ್ಯಾಬ್ಯಾಸದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. 'ನನಗೆ ಓದಲು ಇಷ್ಟವಿದೆ ಆದರೆ ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ಚಮತ್ಕಾರ ಮಾಡಲಿರುವುದರಿಂದ ಶಿಕ್ಷಣಕ್ಕೆ ಸ್ಪಲ್ಪ ಸಮಯ ಮೀಸಲಿರಿಸಬೇಕಿದೆ' ಎಂದಿರುವುದನ್ನು 'ದಿ ಸನ್' ಪತ್ರಿಕೆ ವರದಿ ಮಾಡಿದೆ.

ಹಾಲಿವುಡ್‌ನಲ್ಲಿ ಚಿತ್ರಗಳಲ್ಲಿ ಬಿಡುವಿಲ್ಲದೆ ನಟಿಸುತ್ತಿರುವ ಎಮ್ಮಾ , ಇನ್ನೂ ಎರಡು ಚಿತ್ರಗಳಿಗೆ ಆಯ್ಕೆಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ