ನಿಜವಾಗಲೂ ಸೆಕ್ಸ್ ಎನ್ನುವುದೊಂದು ಆಟನಾ...?

PR
ಸೆಕ್ಸ್ ಎನ್ನುವುದು ನನ್ನ ಅಚ್ಚುಮೆಚ್ಚಿನ ಕ್ರೀಡೆ. ಅದಕ್ಕಾಗಿ ನಾನು ಸದಾ ಹಾತೊರೆಯುವ ಮೂಡ್‌ನಲ್ಲಿರುತ್ತೇನೆ ಎನ್ನುತ್ತಿದ್ದಾರೆ ಹಾಲಿವುಡ್‌ನ ನೀಲಿಗಣ್ಣಿನ ನಟಿ ಕೆಮರಾನ್ ಡಯಾಝ್. ಸೆಕ್ಸ್ ಎಂಬುದೊಂದು ಅದ್ಭುತ ಇಂಗ್ಲೀಷ್ ಪದ. ಆ ಪದವೇ ನನಗೆ ಒಂಥರಾ ಇಷ್ಟವಾಗುತ್ತೆ. ಅದರಲ್ಲೇನೋ ಮರ್ಮವಿದೆ. ನಿಮಗೊಂದು ವಿಷಯ ಗೊತ್ತಾ, 'ಸೆಕ್ಸ್ ನನಗಿಷ್ಟವಾದ ಆಟ' ಎಂಬ ಕೆಮಕಾನ್‌ಳ ಮನದಾಳದ ಮಾತನ್ನು ಮಾಧ್ಯಮಗಳು ವರದಿ ಮಾಡಿವೆ.

ಏನದು ಬಹುಬೇಗನೇ ಉನ್ಮತ್ತರಾಗಲು ಸುಲಭ ಮಾರ್ಗ ಎಂದು ಆಶ್ಚರ್ಯದಿಂದ ಪ್ರಶ್ನಿಸುವ ಈ ನಟಿಗೆ ಆ ವಿಷಯದಲ್ಲಿ ಯಾವತ್ತೂ ಮೂಡ್ ಇರುತ್ತಂತೆ.

ಮೂವತ್ತೆಂಟು ವರ್ಷದ ಕೆಮರಾನ್ ಡಯಾಝ್ ಇತ್ತೀಚೆಗಷ್ಟೆ ಬೇಸ್‌ಬಾಲ್ ತಾರೆ ಅಲೆಕ್ಸ್ ರೋಡ್ರಿಗಸ್ ನೊಂದಿಗಿನ ಸಂಬಂಧಕ್ಕೆ ಗುಡ್ ಬೈ ಹೇಳಿದ್ದರು. ಮದುವೆಯಾಗುವ ಯಾವುದೇ ಇರಾದೆ ಇಲ್ಲ ಎನ್ನುತ್ತಿರುವ ಈಕೆಗೆ ತನಗಿಷ್ಟ ಬಂದಂತೆಲ್ಲಾ ಬದುಕಬೇಕಂತೆ.

ತನ್ನ ಪ್ರಿಯಕರನೊಂದಿಗೆ ಟೂ ಬಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಕೆಮರಾನ್, ಸಾಂಪ್ರದಾಯಿಕವಾಗಿ ಹೀಗೇ ಇರಬೇಕೆಂಬ ಕಟ್ಟುಪಾಡುಗಳಲ್ಲಿ ಬದುಕಬೇಕೆಂದು ನಾವೆಂದೂ ಬಯಸುವುದಿಲ್ಲ, ಅದು ನಮ್ಮ ವಯಕ್ತಿಕ ಪ್ರಪಂಚದಲ್ಲಿ ತುಂಬಾ ದಿನ ಉಳಿಯುವುದೂ ಇಲ್ಲ ಎಂದು ನಂಬಿರುವವಳು ನಾನು. ನನಗನಿಸುತ್ತೆ, ಈ ಮದುವೆ, ಸಂಸಾರ ಎಂದು ಒಂದಾಗುವವರು ಹೆಚ್ಚು ದಿನ ಸುಖವಾಗಿರುವುದಿಲ್ಲ ಎಂದಿದ್ದಾರೆ.

ಈ ಕಾರಣಕ್ಕಾಗಿಯೇ ನಾನಿನ್ನೂ ಮದುವೆಯಾಗಿಲ್ಲ. ಮದುವೆಯಾದರೆ ಆತನನ್ನು ಬಿಟ್ಟುಹೋಗಬೇಕಾದರೆ ಡೈವೋರ್ಸ್ ಕೊಡಬೇಕು. ಅದು ದೊಡ್ಡ ತಲೆ ನೋವು. ನಮಗೆ ಬೇಕಾದಾಗ ನಾವು ಒಟ್ಟಿಗಿರಬೇಕು, ಇಷ್ಟ ಇಲ್ಲಾ ಅಂದ್ರೆ ಬಿಟ್ಟು ಹೋಗ್ಬೇಕು. ನಮ್ಮ ಜೀವನ ಅಂದ್ರೆ ಅದಕ್ಕೆ ನಮ್ಮದೇ ಆದ ನೀತಿ ನಿಯಮಗಳಿರಬೇಕಷ್ಟೇ ಹೊರತು ಮತ್ತೊಬ್ಬರ ಸುಪರ್ದಿಯಲ್ಲಿ ಬದುಕುವುದಲ್ಲಾ ಜೀವನ ಎನ್ನುತ್ತಿದ್ದಾರೆ ಬಣ್ಣದ ಲೋಕದ ಈ ಬೆಡಗಿ.

ಅಂದಹಾಗೆ ಈಕೆ ತನ್ನ ಹದಿನಾರು ವಯಸ್ಸಿನಲ್ಲೇ ಮನೆತೊರೆದು ಸ್ವತಂತ್ರಳಾಗಿ, ಬಣ್ಣದ ಬದುಕನ್ನು ಹರಸಿ ಹೋದವಳು ಈ ಮಟ್ಟಕ್ಕೆ ಬೆಳೆದು ತನ್ನ ಜೀವನ ರೂಪಿಸಿಕೊಂಡಿದ್ದಾರೆ. ಮೆಚ್ಚಬೇಕೋ... ವ್ಯಥೆಯೆನ್ನಬೇಕೋ ನೀವೇ ಹೇಳಿ....

ವೆಬ್ದುನಿಯಾವನ್ನು ಓದಿ