ಬ್ರಿಟನ್ ರಾಜಕುಮಾರನ ವಿವಾಹಕ್ಕಾಗಿ ಪ್ರತ್ಯೇಕ ವೆಬ್‌ಸೈಟ್

ಮುಂಬರುವ ಬ್ರಿಟನ್ ರಾಜಕುಮಾರ ಪ್ರಿನ್ಸ್ ವಿಲಿಯಮ್ ಮತ್ತು ಕೇಟ್ ಮಿಡ್ಲ್‌ಟನ್ ವಿವಾಹದ ಪ್ರಯುಕ್ತ ಹೊಸ ವೆಬ್‌ಸೈಟ್ ತೆರೆಯಲಾಗಿದೆ.

ಏಪ್ರಿಲ್ 29 ರಂದು ಅದ್ದೂರಿಯಾಗಿ ನಡೆಯಲಿರುವ ರಾಜಮನೆತನದ ವಿವಾಹದ ಬಗ್ಗೆ ವಿಶ್ವದಾದ್ಯಂತ ಮಾಧ್ಯಮಗಳು, ಜನತೆ ಉತ್ಸುಕರಾಗಿರುವುದರಿಂದ ಅರಮನೆಯ ಅಧಿಕಾರಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ.

www.officialroyalwedding2011.org ವೆಬ್‌ಸೈಟನ್ನು ಅನುಸರಿಸಿದರೆ ವಿವಾಹದ ವಿಶೇಷಗಳನ್ನು ದಿನೇ-ದಿನೇ ಅರಿತುಕೊಳ್ಳ ಬಹುದಾಗಿದೆ. ವಿಶೇಷವಾಗಿ ಬಹುಜನರ ಆಸಕ್ತಿಯಂತೆ ಕೇಟ್ ಮಿಡ್ಲ್‌ಟನ್ ಮದುವೆ ವಸ್ತ್ರಾಲಂಕಾರಕ್ಕೆ ಸಂಬಂಧಿಸಿದ ಹೆಚ್ಚಿನ ಛಾಯಾಚಿತ್ರಗಳು, ಇನ್ನಿತರ ವೈವಾಹಿಕ ಸಂಬಂಧಿತ ವಿಡಿಯೊಗಳು ಹಾಗೂ ತಾಜಾ ಸುದ್ದಿಗಳು ಈ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ.

ಇದಲ್ಲದೆ ಆಸಕ್ತ ಸಾರ್ವಜನಿಕರಿಗೆ ಅನುಕೂಲವಾಗಲು ಬ್ರಿಟನ್ ಸರಕಾರ ಕೂಡ ಪ್ರತ್ಯೇಕ ವೆಬ್‌‌ಸೈಟ್‌ನ್ನು ಆರಂಭಿಸಿದೆ.

1981ರಲ್ಲಿ ನಡೆದ ಪ್ರಿನ್ಸ್ ಚಾರ್ಲ್ಸ್ ಹಾಗೂ ರಾಜಕುಮಾರಿ ಡಯಾನ ವಿವಾಹ ಮಹೋತ್ಸವವನ್ನು ನೆನಪಿಸುತ್ತಿರುವ ಈ ಅರಸೊತ್ತಿಗೆ ವಿವಾಹ ಮಹೋತ್ಸವದಲ್ಲಿ ಹೆಸರಾಂತ ಪಾಶ್ಚಾತ್ಯ ಸಂಗೀತಗಾರ ಎಲ್ಟನ್ ಜಾನ್ ಮತ್ತು ಡೇವಿಡ್ ಫರ್ನಿಶ್ ಜೋಡಿಯಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ವೆಬ್ದುನಿಯಾವನ್ನು ಓದಿ