ಮತ್ತೆ ಅಲೆಯೆಬ್ಬಿಸಿದ 'ಡ್ಯಾಮ್ 999' ಆಸ್ಕರ್‌ಗೆ ನಾಮನಿರ್ದೇಶನ

ಗುರುವಾರ, 22 ಡಿಸೆಂಬರ್ 2011 (09:09 IST)
PR


ಸುಹನ್ ರಾಯ್ ನಿರ್ದೇಶನದ 'ಡ್ಯಾಮ್ 999' ಚಿತ್ರದ ಮೂರು ಹಾಡುಗಳು ಪ್ರತಿಷ್ಠಿತ 84ನೇ ಆಸ್ಕರ್ ವಾರ್ಷಿಕ ಪ್ರಶಸ್ತಿಗೆ ನಾಮನಿರ್ದೇಶನ ಪಡೆಯುವಲ್ಲಿ ಯಶಸ್ವಿಯಾಗಿದೆ.

ಇದು ಭಾರತೀಯರ ಪಾಲಿಗೆ ಸಂತಸದ ವಿಚಾರವಾಗಿದೆ. ಈ ಹಿಂದೆ ಸ್ಲಮ್ ಡಾಗ್ ಮಿಲಿಯನೇರ್ ಚಿತ್ರದಲ್ಲಿ ಎ. ಆರ್. ರಹಮಾನ್ ಹಾಡಿದ 'ಜೈ ಹೋ' ಅಕಾಡೆಮಿ ಪ್ರಶಸ್ತಿ ಗೆದ್ದಿರುವುದನ್ನು ನಾವಿಲ್ಲಿ ನೆನಪಿಕೊಳ್ಳಬಹುದಾಗಿದೆ.

ಅಕಾಡೆಮಿ ಆಫ್ ಮೊಷನ್ ಪಿಕ್ಚರ್ ಆರ್ಟ್ಸ್ ಆಂಡ್ ಸಯನ್ಸ್ ಅಧಿಕೃತ ವೆಬ್‌ತಾಣದಲ್ಲಿ ಇದನ್ನು ಪ್ರಕಟಿಸಲಾಗಿದ್ದು, 'ಒರಿಜಿನಲ್ ಸಾಂಗ್ ವಿಭಾಗ'ದಲ್ಲಿ ಡ್ಯಾಮ್ 999 ಹಾಡುಗಳು ಕಾಣಿಸಿಕೊಂಡಿವೆ.

(ವಿಡಿಯೋಗಾಗಿ ಮುಂದಿನ ಪುಟ ಕ್ಲಿಕ್ಲಿಸಿ)



ಕೃಪೆ: ಯೂ ಟ್ಯೂಬ

ಪ್ರಶಸ್ತಿ ರೇಸ್‌ನಲ್ಲಿರುವ 39 ಆಯ್ದ ಹಾಡುಗಳಲ್ಲಿ 'ದಕ್ಕನಕ ಡುಗು ಡುಗು', 'ಡ್ಯಾಮ್ 999 ಥಿಮ್ ಸಾಂಗ್' ಮತ್ತು 'ಮುಜೆ ಚೊಡ್ ಕೆ' ಹೆಸರಿನ ಮೂರು ಹಾಡುಗಳು ಕಾಣಿಸಿಕೊಂಡಿವೆ. ಇದೀಗ ನಾಮನಿರ್ದೇಶನದ ಅಂತಿಮ ಪಟ್ಟಿಯು 2012 ಜನವರಿ 24ಕ್ಕೆ ಬಿಡುಗಡೆಯಾಗಲಿದೆ.

ಚೀನಾದ ಅಣೆಕಟ್ಟು ತಲಹದಿಯಲ್ಲಿ ಸುಹಾನ್ ರಾಯ್ ನಿರ್ಮಿಸಿರುವ ಚಿತ್ರವು ಮುಲ್ಲಾಪೇರಿಯರ್ ಅಣೆಕಟ್ಟು ವಿವಾದದಲ್ಲಿ ಕೇರಳದ ನಿಲುವಿಗೆ ಪೂರಕವಾಗಿದೆ ಎಂದು ಆಪಾದಿಸಿದ್ದ ತಮಿಳುನಾಡು ಸರಕಾರವು ಚಿತ್ರಕ್ಕೆ ನಿಷೇಧ ಹೇರಿರುವುದು ವಿವಾದಕ್ಕೆ ಕಾರಣವಾಗಿತ್ತು.

'ಡ್ಯಾಮ್ 999' ಚಿತ್ರದಲ್ಲಿ ಭಾರತೀಯ ನಟ ರಜಿತ್ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಟಿ ವಿಮಲ ರಾಮನ್, ವಿನಯ್ ರಾಯ್ ಮತ್ತು ಆಶಿಶ್ ವಿದ್ಯಾರ್ಥಿ ಅವರಂತಹ ಪ್ರಖ್ಯಾತರ ನಟನೆಯು ಚಿತ್ರದ ಯಶಸ್ವಿಗೆ ಕಾರಣವಾಗಿತ್ತು. ಚಿತ್ರ ಈಗಾಗಲೇ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಿಗೆ ಭಾಷಾಂತರಗೊಂಡಿವೆ.

ವೆಬ್ದುನಿಯಾವನ್ನು ಓದಿ